ನೀರ ಮೇಲೆ ನಡೆಯಿರಿ ನೀರಿನ ಮೇಲೆ ನಡೆಯುವುದು ಈಗ ಕೇವಲ ಸಾಧಕರ ಸಾಹಸವಲ್ಲ. ನಾವು ನೀವೂ ನಡೆದು ಪವಾಡ ಮಾಡಬಹುದು ಎಂದರೆ ಆಶ್ಚರ್ಯವಾಗಬಹುದಲ್ಲವೇ... ನೀರಿನ ಮೇಲೆ ನಡೆಯುವುದು ಈಗ ಕೇವಲ ಸಾಧಕರ ಸಾಹಸವಲ್ಲ. ನಾವು ನೀವೂ ನಡೆದು ಪವಾಡ ಮಾಡಬಹುದು ಎಂದರೆ ಆಶ್ಚರ್ಯವಾಗಬಹುದಲ್ಲವೇ? ನಿಜಕ್ಕೂ ಇದು ಸತ್ಯ. ಇಷ್ಟೆಲ್ಲ ಪವಾಡ ಮಾಡಬಹುದಾದದ್ದು ಒಂದು ಶೂನಿಂದ! ಸ್ಕೀ ಗಳಂತೆಯೇ ಇರುವ ಈ ಶೂ ಗಳನ್ನು ಧರಿಸಿದ ಮೇಲೆ ನೀರಿನ ಮೇಲೆ ಪೋಲ್ ಗಳ ಸಹಾಯದಿಂದ ಬೇಕಾದ ದಿಕ್ಕಿನಲ್ಲಿ ಚಲಿಸಬಹುದು. ಈ ಶೂ ನೋಡಿ ಗಾಭರಿಯಾಗಬೇಡಿ, ನೋಡಲು ಸ್ವಲ್ಪ ದೊಡ್ಡದಾಗಿದ್ದರೂ ತುಂಬಾ ಹಗುರವಾಗಿದೆ. ಅಗಲವಾಗರಿವುದರಿಂದಲೇ ನೀರಿನಲ್ಲಿ ತೇಲಲು ಸಹಾಯಕವಾಗಿವೆ. ಇದರ ಬೆಲೆಯೂ ಕಡಿಮೆ ಇದ್ದು, ಯಾರೂ ಬೇಕಾದರೂ ಖರೀದಿಸಿ ನೀರಿನ ಮೇಲೆ ತೇಲಬಹುದು, ಅಷ್ಟೇ ಅಲ್ಲ ಸಮುದ್ರದ ಮಧ್ಯದವರೆಗೂ ಹೋಗಿ ಮೀನು ಕೂಡ ಹಿಡಿಯಬಹುದು.