ಟ್ವೀಟರ್ ಮ್ಯೂಸಿಕ್ ಕಮಿಂಗ್ ಸೂನ್ ಜಗತ್ತಿನ ಅತಿ ವೇಗದ ಮಾಧ್ಯಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟ್ವೀಟರ್ ಇದೀಗ ಮ್ಯೂಸಿಕ್ ಜಗತ್ತಿಗೆ ಕಾಲಿಡುತ್ತಿದೆ. ಪ್ರಾಥಮಿಕ ಹಂತದಲ್ಲಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ಕೆಲ ಮ್ಯೂಸಿಕ್ ಕಂಪನಿಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿರುವ ಟ್ವೀಟರ್ ಸಂಸ್ಥೆಯು ತನ್ನ ಬಳಕೆದಾರರಿಗೆ ನೂತನ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಬಳಕೆದಾರರು ಬಯಸುವ ಮ್ಯೂಸಿಕ್‌ಗಳು ಆನ್‌ಲೈನಲ್ಲಿಯೇ ಲೈವ್ ಆಗಿ ಪಡೆಯುವ ಅವಕಾಶ ಇದಾಗಿದೆ. ಈ ಬಗ್ಗೆ ಇನ್ನು ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಇದಲ್ಲದೇ ಟ್ವೀಟರ್ ಮ್ಯೂಸಿಕ್‌ನ ಸ್ಪಷ್ಟ ರೂಪವೂ ಇನ್ನಷ್ಟೇ ತಿಳಿಯಬೇಕಿದೆ. ಒಟ್ಟಿನಲ್ಲಿ ಇನ್ನು ಟ್ವೀಟಿಸುವಾಗಲೂ ರಾಗಬದ್ಧವಾಗಿ ಟ್ವೀಟಿಸುವ ದಿನ ಬರಬಹುದು!