ದಿ ಪ್ಯಾನಸಾನಿಕ್ 31 ದೇಶದ ಗ್ರಾಹಕರಿಗೆ ಉನ್ನತ ಮಟ್ಟದ ಸ್ಮಾರ್ಟ್‌ಫೋನ್ ಒದಗಿಸುವುದಾಗಿ ಭರವಸೆ ನೀಡಿದ್ದ ಪ್ಯಾನಸಾನಿಕ್ ಸಂಸ್ಥೆ ನೂತನ ಸ್ಮಾರ್ಟ್‌ಫೋನ್ 'ದಿ ಪ್ಯಾನಸಾನಿಕ್ 31' ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಉನ್ನತ ಮಟ್ಟದ ತಂತ್ರಜ್ಞಾನ, ಆಧುನಿಕ ತಾಂತ್ರಿಕ ಸಾಮರ್ಥ್ಯದೊಂದಿಗೆ ಆಕರ್ಷಕ ವಿನ್ಯಾಸ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆ್ಯಂಡ್ರಾಯ್ಡ್ 4.2.2 ಹೊಂದಿದೆ. ಹಲವು ಅಪ್ಲಿಕೇಷನ್, ನಾಲ್ಕು ಇಂಚಿನ ಡಬ್ಲ್ಯೂವಿಜಿಎ ಸ್ಕ್ರೀನ್, ಡ್ಯುಯಲ್ ಕೋರ್ ಪ್ರೊಸೆಸರ್ ತಂತ್ರಜ್ಞಾನ ಇದರ ವಿಶೇಷತೆ. 31 ಸ್ಮಾರ್ಟ್‌ಫೋನ್ ಅಕ್ಟೋಬರ್ 2ನೇ ವಾರದಿಂದ ಮಾರುಕಟ್ಟೆಗೆ ಬರಲಿದೆ. ಇದರ ಬೆಲೆ ರು. 7990.