ಫೇಸ್‌ಬುಕ್ ಸೇರಿಕೊಂಡ ಲಿಟ್ಲ್ ಐ ಮೊಬೈಲ್ ಅಪ್ಲಿಕೇಷನ್‌ಗಳ ಅಭಿವೃದ್ಧಿಗಾಗಿ ಬೆಂಗಳೂರು ಮೂಲದ ಲಿಟ್ಲ್ ಐ ಲ್ಯಾಬ್ ಸಂಸ್ಥೆಯು ಫೇಸ್‌ಬುಕ್ ಕಂಪನಿಯನ್ನು ಸೇರಿದೆ. ಒಂದು ವರ್ಷದ ಹಿಂದಷ್ಟೆ ಬೆಂಗಳೂರಲ್ಲಿ ಪ್ರಾರಂಭವಾದ ಈ ಸಂಸ್ಥೆ ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳ ಅಭಿವೃದ್ಧಿಯಲ್ಲಿ ಉತ್ತಮ ಹೆಸರು ಪಡೆದಿತ್ತು. ಫೇಸ್‌ಬುಕ್‌ನ ಮೊಬೈಲ್ ಅಪ್ಲಿಕೇಷನ್‌ಗಳ ಅಭಿವೃದ್ದಿಪಡಿಸಲೆಂದೇ ಈ ಕಂಪನಿಯನ್ನು ಫೇಸ್‌ಬುಕ್ ಸಂಸ್ಥೆಯು 15 ಮಿಲಿಯನ್ ಡಾಲರ್ ಬೆಲೆಗೆ ಖರೀದಿಸಿದೆ. ಏಪ್ರಿಲ್ ವೇಳೆಗೆ ಹೊಸ ಉತ್ಪನ್ನವೊಂದನ್ನು ಬಿಡುಗಡೆಮಾಡುವ ಸೂಚನೆಯನ್ನು ಕಂಪನಿ ಇದೇ ಸಂದರ್ಭದಲ್ಲಿ ನೀಡಿದೆ. ಇನ್ನು ಮುಂದೆ ಬೆಂಗಳೂರಿನ ಕಂಪನಿಯು ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಂದಹಾಗೆ, ಫೇಸ್‌ಬುಕ್‌ನ ಕೇಂದ್ರ ಕಚೇರಿ ಇರುವುದೂ ಇಲ್ಲಿಯೇ.