ತಪ್ಪು ಬರೆದರೆ ನಡುಗುವ ಪೆನ್ ಇಟ್ಟರೆ ಸಾಕು ಬರೆದುಕೊಂಡು ಹೋಗುವ ಪೆನ್ ಇದ್ದರೆ ಎಷ್ಟು ಚೆನ್ನ ಅಂತ ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ ಅಂದುಕೊಂಡಿರುತ್ತಾರೆ. ಅಂತಹ ಪೆನ್ ಇನ್ನೂ ಬಂದಿಲ್ಲ. ಆದರೆ ಬರೆಯುವಾಗ ನೀವು ತಪ್ಪು ಮಾಡಿದಲ್ಲಿ, ತಪ್ಪಾದ ಸ್ಪೆಲ್ಲಿಂಗ್ ಬರೆದಲ್ಲಿ ವೈಬ್ರೇಟ್ ಆಗುವ ಮೂಲಕ ನಿಮ್ಮನ್ನು ಎಚ್ಚರಿಸುವ ಪೆನ್ ಕಂಡುಹಿಡಿಯಲಾಗಿದೆ! ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವುದರಿಂದ ಹಾಗೂ ಸಾಕಷ್ಟು ಮಂದಿ 'ಸ್ಪೆಲ್‌ಚೆಕ್‌' ಮತ್ತು ಮೊಬೈಲ್‌ಗಳಲ್ಲಿ 'ಆಟೋ ಕರೆಕ್ಟ್‌' ಆಯ್ಕೆಗಳು ಲಭ್ಯವಿದೆ. ಬರೆಯುವಾಗ ಸ್ಪೆಲ್ಲಿಂಗ್ ಸರಿ ಇಲ್ಲದಿದ್ದರೂ ತನ್ನಿಂದ ತಾನೇ ಸರಿಯಾದ ಸ್ಪೆಲ್ಲಿಂಗ್ ಅಳವಡಿಸುವ ಸಾಮರ್ಥ್ಯ ಈಗಿನ ಸಾಧನಗಳಿಗಿದೆ. ಇದರ ಮೇಲೆ ಮಿತಿಮೀರಿ ಅವಲಂಬಿತವಾಗಿರುವ ಜನರಿಗೆ ಪೇಪರ್ ಮೇಲೆ ಬರೆಯುವುದು ಕಷ್ಟವಾಗಬಹುದು. ಅದಕ್ಕೆಂದೇ ಜರ್ಮನಿಯ ಕಂಪನಿಯೊಂದು ಇಂತಹ ಪೆನ್ ಕಂಡುಹಿಡಿದಿದೆ. ತನ್ನ ಮಗ ತಪ್ಪು ಬರೆಯುತ್ತಿದ್ದುದನ್ನು ತಿದ್ದಿ, ತಿದ್ದಿ, ಅದಕ್ಕಾಗಿಯೇ ಒಂದು ಪೆನ್ ಯಾಕೆ ತಯಾರಿಸಬಾರದು ಎಂಬ ಯೊಚನೆ ಬಂತಂತೆ ಅವರಿಗೆ. ಮುಂದೆ ಈ ಪೆನ್‌ಗೆ ಕಂಪ್ಯೂಟರ್ ಸಂಪರ್ಕ, ಇದಕ್ಕಾಗಿಯೇ ಒಂದು ಅಪ್ಲಿಕೇಶನ್ ಕೂಡ ತಯಾರಿಸುವ ಯೋಚನೆ ಇದೆಯಂತೆ.