ಮೈಕ್ರೊ ಫೈರ್ ಬ್ರ್ಯಾಂಡ್ ಚಿಕ್ಕ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರೀ ಪೈಪೋಟಿ ನೀಡುತ್ತಿರುವುದು ಗೊತ್ತೇ ಇದೆ... ಚಿಕ್ಕ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳಿಗೆ ಭಾರೀ ಪೈಪೋಟಿ ನೀಡುತ್ತಿರುವುದು ಗೊತ್ತೇ ಇದೆ. ಈಗ ಫೈರ್ ಕಂಪನಿ ಅತ್ಯಂತ ಕಡಿಮೆ ದರದಲ್ಲಿ ಆ್ಯಂಡ್ರಾಯ್ಡ್ ಲಾಲಿಪಾಪ್ ಸಾಫ್ಟ್ ವೇರ್ ಹೊಂದಿರುವುದು ವಿಶೇಷ. ಬಹುಶಃ ಲಾಲಿಪಾಪ್ ಸಾಫ್ಟ್ ವೇರ್ ಹೊಂದಿರುವ ಅತ್ಯಂತ ಕಡಿಮೆ ದರದ ಮೊಬೈಲ್. ಬಾರ್ಸಿಲೋನಾದಲ್ಲಿ ನಡೆದ ವಲ್ಡ್ ಮೊಬೈಲ್ ಕಾಂಗ್ರೆಸ್‍ನಲ್ಲಿ ಈ ಮೊಬೈಲನ್ನು ಕಂಪನಿ ಪ್ರದರ್ಶಿಸಿದೆ. ಗೋರಿಲ್ಲಾ ಗ್ಲಾಸ್ ಅಳವಡಿಸಿರುವುದು ಕೂಡ ವಿಶೇಷ. ಆದರೆ ಉಳಿದಂತೆ ಈ ಮೊಬೈಲ್‍ನ ಸ್ಪೆಸಿಫಿಕೇಶನ್ ಗಳು ಅಷ್ಟೇನೂ ಆಕರ್ಷಕವಾಗಿಲ್ಲ. ಆದರೆ ಅತ್ಯಂತ ಕಡಿಮೆ ದರದಲ್ಲಿ ಇತ್ತೀಚಿನ ಸಾಫ್ಟ್ ವೇರ್ ಇರುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುತ್ತಿರುವುದು ಕೆಲವರ ಪಾಲಿಗೆ ಸಂತಸದ ಸುದ್ದಿ.