27 ವರ್ಷಗಳ ಇಂಟರ್ ನೆಟ್ ಎಕ್ಸ್ಪ್ಲೋರರ್ ಜೂನ್ 15 ಕ್ಕೆ ನಿವೃತ್ತಿ ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ. ವಾಷಿಂಗ್ ಟನ್: ಮೈಕ್ರೋಸಾಫ್ಟ್ ನ ಅತ್ಯಂತ ಹಳೆಯ ಬ್ರೌಸರ್ ಐ.ಇ 27 ವರ್ಷಗಳ ಬಳಿಕ ಜೂ.15 ರಂದು ನಿವೃತ್ತಿ ಹೊಂದುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಮೈಕ್ರೋಸಾಫ್ಟ್ ವೆಬ್ ಸೈಟ್ ನ ಮೂಲಕ ಐ.ಇ ನಿವೃತ್ತಿಯನ್ನು ಘೋಷಿಸಲಾಗಿತ್ತು. ವಿಂಡೋಸ್ 10 ನ ಕೆಲವು ನಿರ್ದಿಷ್ಟ ಆವೃತ್ತಿಗಳಲ್ಲಿ ಐ.ಇ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದ್ದು, ಇದನ್ನು ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಮೈಕ್ರೀಸಾಫ್ಟ್ ಎಡ್ಜ್ ಗೆ ವರ್ಗಾವಣೆಯಾಗುವಂತೆ ಸೂಚಿಸಿದೆ. . ' . , ' eraಐ.ಇ ಬಳಕೆ ಮಾಡುವವರನ್ನು ಜು.15 ರಿಂದ ಮೈಕ್ರೋಸಾಫ್ಟ್ ಎಡ್ಜ್ ಗೆ ರೀಡೈರೆಕ್ಟ್ ಮಾಡಲಾಗುತ್ತದೆ. ಮಾರ್ಗದರ್ಶನದಿಂದ ಹಿಡಿದು, ವಿಡಿಯೋ ಟುಟೋರಿಯಲ್ ವರೆಗೂ ಎಲ್ಲಾ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. 27 , 15th. ../rIpcHFWoU3ಐ.ಇಯನ್ನು 1995 ರಲ್ಲಿ ವಿಂಡೋಸ್ 95 ರ ಆಡ್ ಆನ್ ಪ್ಯಾಕೇಜ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ಯಾಕೇಜ್ ನ ಭಾಗವಾಗಿ ಕಂಪನಿ ಉಚಿತವಾಗಿ ಬ್ರೌಸರ್ ನ್ನು ನೀಡುವುದನ್ನು ಪ್ರಾರಂಭಿಸಿತ್ತು. 2003 ರಲ್ಲಿ ಬ್ರೌಸರ್ ಶೇ.95 ರಷ್ಟು ಬಳಕೆದಾರರೊಂದಿಗೆ ಉತ್ತುಂಗದಲ್ಲಿತ್ತು. ಆದರೆ ಹೊಸ ಬ್ರೌಸರ್ ಗಳ ಪರಿಚಯವಾದ ಪರಿಣಾಮ, ಏಕಾ ಏಕಿ ಬಳಕೆದಾರರ ಸಂಖ್ಯೆ ತೀವ್ರ ಕುಸಿತ ಕಂಡಿತ್ತು.