ಕನಸಿಗೆ ಭಾಷೆ ಉಂಟಾ? ವಿಚಿತ್ರ ಪ್ರಶ್ನೆ ಅಲ್ವಾ...? ಯಾವತ್ತಾದ್ರೂ ನೀವು ಕನಸಿನ ಭಾಷೆ ಬಗ್ಗೆ ಯೋಚನೆ ಮಾಡಿದ್ದೀರಾ? ಯೋಚನೆ ಮಾಡಿಲ್ಲ ಎಂದಾದರೆ ಇವತ್ತಿನಿಂದಲೇ ಯೋಚಿಸಿ. ನಿಮಗೆ ಅಚ್ಚರಿ ಕಾದಿದ್ದರೂ ಕಾದಿರಬಹುದು. ವಿಜ್ಞಾನಿಗಳ ಪ್ರಕಾರ ಬಹಳಷ್ಟು ಕನಸಿಗಳಿಗೆ ಇಂಥದ್ದೇ ಭಾಷೆ ಅಂಥ ಇರಲ್ವಂತೆ. ನಮ್ಮ ಅರಿವಿಗೆ ಬಾರದೇ ಕನಸಿನಲ್ಲಿ ಬಂದು ಹೋಗುವ ಎಲ್ಲಾ ಸಂಗತಿಗಳು ನಮಗೆ ಗೊತ್ತಾಗುತ್ತಿರುತ್ತವೆ. ಆದರೆ ಎದ್ದ ಮೇಲೆ ನೆನಪಿಗೆ ಬರೋದು ಕಷ್ಟ. ನಿಮಗೆ ಗೊತ್ತಿದೆಯೋ, ಇಲ್ಲವೋ... ಎಷ್ಟೋ ಕನಸುಗಳು ನಮ್ಮದಲ್ಲದ ಭಾಷೆಯಲ್ಲಿ ಬಿದ್ದಿರುತ್ತವೆ. ಅಂದ್ರೆ ಫ್ರೆಂಚ್ ಅಲ್ಲೋ, ಅರೇಬಿಕ್ ಭಾಷೆಯಲ್ಲೋ; ಇಂಗ್ಲಿಷ್ ಗೊತ್ತಿಲ್ಲದವರಿಗೂ, ಇಂಗ್ಲಿಷ್‌ನಲ್ಲಿ ಬಿದ್ದಿರುತ್ತವಂತೆ. ಆದರೆ ಇದಾವುದೂ ಸತ್ಯವಲ್ಲ, ನಿಮ್ಮ ಅರಿವಿಗೆ ಬಾರದ ಭ್ರಾಂತಿಯಷ್ಟೇ ಎಂದೂ ವಿಜ್ಞಾನಿಗಳು ಹೇಳುತ್ತಾರೆ.