ನಿಮ್ಮ ಪೆಗ್ ಗೆ ಬ್ರೇಕ್ ಹಾಕುವ ಮದ್ಯಪಾನ ಆಪ್ ದಿನಕ್ಕೆ/ವಾರಕ್ಕೆ ಸಲಹೆ ನೀಡಿರುವುದಕ್ಕಿಂತಲೂ ಹೆಚ್ಚಿನ ಮದ್ಯಪಾನ ಸೇವನೆಯನ್ನು ತಡೆಗಟ್ಟಲು ನಿಮ್ಮ ಸ್ಮಾರ್ಟ್ ಫೋನ್ ಗೆ ನೂತನ ಆಪ್ ಒಂದನ್ನು ವಾಶಿಂಗ್ಟನ್: ದಿನಕ್ಕೆ/ವಾರಕ್ಕೆ ಸಲಹೆ ನೀಡಿರುವುದಕ್ಕಿಂತಲೂ ಹೆಚ್ಚಿನ ಮದ್ಯಪಾನ ಸೇವನೆಯನ್ನು ತಡೆಗಟ್ಟಲು ನಿಮ್ಮ ಸ್ಮಾರ್ಟ್ ಫೋನ್ ಗೆ ನೂತನ ಆಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಬಿಎಂಜೆ ನಡೆಸಿರುವ ಅಧ್ಯಯನದ ಪ್ರಕಾರ ಈ ಮದ್ಯಪಾನ ನಿಯಂತ್ರಣ ಆಪ್ ನಲ್ಲಿ ಮನೋವೈಜ್ಞಾನಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿದ್ದು, ದೇಹಕ್ಕೆ ಮಾರಕವಾಗಬಲ್ಲ ಕುಡಿತದ ಚಟಕ್ಕೆ ಬ್ರೇಕ್ ಹಾಕಬಲ್ಲದ್ದಾಗಿದೆ ಎಂದು ತಿಳಿದುಬಂದಿದೆ. ಬಳಕೆದಾರರು ಈ ಆಪ್ ಗೆ ನೊಂದಣಿ ಮಾಡಿಕೊಂಡು, ದಿನಕ್ಕೆ ವಾರಕ್ಕೆ ಕುಡಿಯಬಲ್ಲ, ಬಿಯರ್, ಪೆಗ್, ಗ್ಲಾಸ್ ಸಂಖ್ಯೆಯನ್ನು ತಿಳಿಸಿದರೆ, ದೈನಂದಿನ ಅಥವಾ ವಾರಾಂತ್ಯಕ್ಕೆ ಹೆಚ್ಚುವರಿ ಕುಡಿತವನ್ನು ಲೆಕ್ಕ ಹಾಕಿ ಗುಣಿಸಿ ಭಾಗಿಸಿ ನಿಮ್ಮನ್ನು ಎಚ್ಚರಿಸಲಿದೆಯಂತೆ! ಅಲ್ಲದೆ ಮಧ್ಯಪಾನ ಸಹಾಯವಾಣಿ ಅಂತರ್ಜಾಲ ತಾಣಗಳ ಕೊಂಡಿಗಳನ್ನು ಕೂಡ ಈ ಆಪ್ ಒದಗಿಸುತ್ತದಂತೆ. ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸುರಕ್ಷಿತ ಮಟ್ಟದಲ್ಲಿ ಎಷ್ಟು ಮದ್ಯಪಾನ ಮಾಡಬಹುದು ಎಂದು ಕೆಲವು ಸಂಸ್ಥೆಗಳು ಶಿಫಾರಸ್ಸು ಮಾಡುತ್ತವಂತೆ. ಈಗಾಗಲೇ ಮಾರುಕಟ್ಟೆಯಲ್ಲಿ ಮದ್ಯಪಾನ ಸಂಬಂಧಿ ಆಪ್ ಗಳು ಬಹುತೇಕ ಚಾಲ್ತಿಯಲ್ಲಿವೆ. ಆದರೆ ಅವು ಹೆಚ್ಚು ಮನರಂಜನೆಗೆ ಸೇರಿದ್ದವು ಅಥವಾ ಕುಡಿತವನ್ನು ಸಂಪೂರ್ಣವಾಗಿ ಕಡಿತಗೊಳಿಸುವಂತಹುವು. ಈ ಪ್ರಯೋಗವನ್ನು ಬಿಎಂಜೆ ಇನ್ನೊವೇಶನ್ಸ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.