ಸತ್ತ ನಂತರವೂ ಫೇಸ್‌ಬುಕ್ ಜೀವಂತವಾಗಿರುತ್ತದೆ! ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ ಖಾತೆ ಏನಾಗುತ್ತದೆ, ಯಾರಾದರು ನಮ್ಮ ಖಾತೆಯನ್ನು ಹ್ಯಾಕ್... ಸನ್ ಫ್ರಾನ್ಸಿಸ್ಕೋ: ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ ಖಾತೆ ಏನಾಗುತ್ತದೆ, ಯಾರಾದರು ನಮ್ಮ ಖಾತೆಯನ್ನು ಹ್ಯಾಕ್ ಮಾಡಿ ಕೆಟ್ಟ ಸಂದೇಶ ಫೋಟೋಗಳನ್ನು ಸ್ನೇಹಿತರಿಗೆ ರವಾನಿಸಿಬಿಟ್ಟರೆ ಏನು ಮಾಡೋದು? ಈ ರೀತಿಯ ಆಲೋಚನೆಗಳಿಗೆ ಫೇಸ್‌ಬುಕ್ ಸಂಸ್ಥೆ ಫುಲ್ ಸ್ಟಾಪ್ ಹಾಕಿದ್ದು, ಇನ್ನು ಮುಂದೆ ನಾವು ಸತ್ತ ಮೇಲೆ ನಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆ ಬಳಕೆದಾರರಿಗೆ ಸೌಲಭ್ಯವನ್ನು ಒದಗಿಸಿದೆ. ಮೊದಲೆಲ್ಲಾ ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆ ಫೇಸ್‌ಬುಕ್ ಸಂಸ್ಥೆಯೇ ಅವರ ಖಾತೆಯನ್ನು ಶಾಶ್ವತವಾಗಿ ರದ್ದಾಗುವಂತೆ ಮಾಡುತ್ತಿತ್ತು. ಆದರೆ, ಇನ್ನು ಮುಂದೆ ಸಾವನ್ನಪ್ಪಿದವರ ಖಾತೆ ಜೀವಂತವಾಗಿರಲಿದ್ದು, ಅವರ ಖಾತೆಯನ್ನು ಅವರು ಆಯ್ಕೆ ಮಾಡಿದ ವ್ಯಕ್ತಿ ಮುನ್ನಡೆಸಿಕೊಂಡು ಹೋಗಲಿದ್ದಾರೆ. ಸದ್ಯ ಈ ಸೌಲಭ್ಯವನ್ನು ಫೇಸ್‌ಬುಕ್ ಸಂಸ್ಥೆ ಅಮೆರಿಕಾದ ಫೇಸ್‌ಬುಕ್ ಬಳಕೆದಾರರಿಗೆ ಮಾತ್ರ ಒದಗಿಸಿದ್ದು, ಶೀಘ್ರದಲ್ಲೇ ಜಗತ್ತಿನಾದ್ಯಂತ ಎಲ್ಲಾ ಬಳಕೆದಾರರಿಗೂ ನೀಡಲಿದೆ. ಸಾವನ್ನಪ್ಪಿದವರನ್ನು ಸಜೆಸ್ಟ್ ಫ್ರೆಡ್ಸ್ ಲಿಸ್ಟ್ ನಿಂದ ಹೊರಗಿಡುವಂತಹ ಕೆಲಸವನ್ನು ಶೀಘ್ರದಲ್ಲೇ ನೀಡುವ ಭರವಸೆಯನ್ನು ಫೇಸ್‌ಬುಕ್ ಸಂಸ್ಥೆ ನೀಡಿದೆ. ಆಯ್ಕೆ ಹೇಗೆ ಮಾಡುವುದು?... ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ 'ಲಿಗಸಿ ಕಾಂಟ್ಯಾಕ್ಟ್' ಕ್ಲಿಕ್ ಮಾಡಬೇಕು. ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.