ದುಬಾರಿ ನೆಕ್ಸಸ್ ಲಾಲಿಪಾಪ್ ಬಿಡುಗಡೆಗೆ ನೆಕ್ಸಸ್ -6ನ್ನು ವೇದಿಕೆಯನ್ನಾಗಿ ಉಪಯೋಗಿಸಿಕೊಳ್ಳಲಾಗಿದೆ. ಗೂಗಲ್‌ನ ಲೇಟೆಸ್ಟ್ ಸ್ಟೈಲ್ ... ಲಾಲಿಪಾಪ್ ಬಿಡುಗಡೆಗೆ ನೆಕ್ಸಸ್ -6ನ್ನು ವೇದಿಕೆಯನ್ನಾಗಿ ಉಪಯೋಗಿಸಿಕೊಳ್ಳಲಾಗಿದೆ. ಗೂಗಲ್‌ನ ಲೇಟೆಸ್ಟ್ ಸ್ಟೈಲ್ ಇದಾಗಿದೆ. ತನ್ನ ಹೊಸ ಆಪರೇಟಿಂಗ್ ಸಿಸ್ಟಮ್‌ನ್ನು ನೆಕ್ಸಸ್ ಫೋನ್‌ಗಳೊಂದಿಗೆ ಬಿಡುಗೆ ಮಾಡುತ್ತಿದೆ. ಸ್ಮಾರ್ಟ್ ಮಾರುಕಟ್ಟೆಯಲ್ಲಿನ ಇತರ ಫೋನ್‌ಗಳನ್ನು ನೋಡಿದಾಗ ನೆಕ್ಸಸ್ ಹಾಗೂ ಮೋಟೋ ಜಿ ಮತ್ತು ಎಕ್ಸ್ ಮಾದರಿಗಳು ಉತ್ತಮ ಎನಿಸುತ್ತವೆ. ಯಾವ ಸಂದರ್ಭದಲ್ಲಿಯೂ ಹ್ಯಾಂಗ್ ಆಗುವುದಿಲ್ಲ. ಸ್ಯಾಮ್ ಸಂಗ್‌ನಲ್ಲಿ ಅನುಭವಿಸಿದಂತೆ ಯಾವುದೇ ನಿಧಾನಗತಿಯಲ್ಲಿ ಕೆಲಸವಾಗುವುದಿಲ್ಲ. ಅಂದಹಾಗೆ ನೆಕ್ಸಸ್-6 ಭಾರತದಲ್ಲಿ ರು. 40 ರಿಂದ 45 ಸಾವಿರದೊಳಗೆ ಸಿಗಬಹುದು. ನೆಕ್ಸಸ್ -9 ಟ್ಯಾಬ್ಲೆಟ್ ಆಗಿದ್ದು, ವಿನ್ಯಾಸದಲ್ಲಿ ಇವೆರಡು ಅದ್ಬುತವಾಗಿ ಕಾಣುತ್ತದೆ. ನೆಕ್ಸಸ್ -6 ಸ್ಮಾರ್ಟಿಯು 3 ಜೆಬಿ ರ್ಯಾಮ್ ಹಾಗೂ 2.7ಗಿಗಾ ಹರ್ಟ್ಸ್ ಕ್ವಾಲಾಕಾಮ್ ಕ್ವಾಡ್‌ಕೋಪಿ ಪ್ರೊಸೆಸರ್ ಹೊಂದಿದೆ. 32 ಹಾಗೂ 64 ಜೆಬಿ ಇಂಟರ್ನಲ್ ಮೆಮೊರಿ ಲಭ್ಯವಿದ್ದು, ವಾಟರ್ ಪ್ರೂಫ್ ವಿನ್ಯಾಸ ಮಾಡಲಾಗಿದೆ. 5.96 ಇಂಚಿನ ಸ್ಕ್ರೀನ್‌ಗೆ 3220 ಎಂಎಎಚ್ ಬ್ಯಾಟರಿ ನೀಡಲಾಗಿದೆ. ನ್ಯಾನೋ ಸಿಮ್ ನೀಡಲಾಗಿದ್ದು, ಭಾರತದಲ್ಲಿರುವ ಎಲ್ಲ ರೀತಿಯ ನೆಟ್‌ವರ್ಕ್ ಹಾಗೂ 4 ಜಿ ಡಾಟಾಗಳಿಗೆ ಇದು ಸಹಕರಿಸಲಿದೆ. 13 ಎಂಪಿ ಪ್ರೈಮರಿ ಹಾಗೂ 2 ಎಂಪಿ ಸೆಕಂಡರಿ ಕ್ಯಾಮೆರಾ ನೀಡಲಾಗಿದ್ದು, 4 ಕೆ ರೆಸಲೂಷನ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಅವಕಾಶವಿದೆ. ಸಧ್ಯಕ್ಕೆ ನೆಕ್ಸಸ್ 6 ಮಿಡ್‌ನೈಟ್ ಬ್ಲ್ಯೂ ಹಾಗೂ ಕ್ಲೌಡ್ ವೈಟ್ ಬಣ್ಣದಲ್ಲಿ ಮೊಬೈಲ್ ಲಭ್ಯವಿದೆ. ನೆಕ್ಸಸ್ 9 , 8.9 ಇಂಚಿನ ಟ್ಯಾಬ್ಲೆಟ್ ಆಗಿದ್ದು , 6700 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಪ್ರಾಥಮಿಕ ಪ್ರಯೋಗ ಮಾಡಲಾಗಿದೆ. ಮೆಸೇಜಿಂಗ್‌ಗೆ ಹೊಸ ಅಪ್ಲಿಕೇಷನ್ ನೀಡಲಾಗಿದ್ದು, ಇದರಿಂದ ಎಂಎಂಎಸ್, ವಿಡಿಯೋ ಚಾಟ್ ಹಾಗೂ ವಾಯ್ಸ್ ಮೆಸೇಜಿಂಗ್ ಮಾಡಬಹುದಾಗಿದೆ. ಇದು ಗೂಗಲ್ ಹ್ಯಾಂಗ್‌ಔಟ್ಸ್‌ಗೆ ಪರ್ಯಾಯವಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. 2015ರ ಮೊದಲಾರ್ಧದಲ್ಲಿ ಹೊಸ ಅಪ್ಲಿಕೇಷನ್ ಬರಲಿದೆ ಎಂದು ಈಗಾಗಲೇ ಗೂಗಲ್ ತಿಳಿಸಿದೆ. ಇದರಿಂದ ಹೊಸ ಮೆಸೆಂಜರ್ ಮತ್ತಷ್ಟು ಕೌತುಕ ಸೃಷ್ಟಿಸಿದೆ.