ಕನ್ನಡದಲ್ಲೂ ಇನ್ನು . ಡೊಮೈನ್ ಇಂಗ್ಲಿಷ್ ಜ್ಞಾನವಿಲ್ಲದ ಬಹು ಸಂಖ್ಯಾತ ನಾಗರಿಕರನ್ನು ತಲುಪುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ . ಡೊಮೈನ್... ಭೋಪಾಲ್: ಇಂಗ್ಲಿಷ್ ಜ್ಞಾನವಿಲ್ಲದ ಬಹು ಸಂಖ್ಯಾತ ನಾಗರಿಕರನ್ನು ತಲುಪುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ . ಡೊಮೈನ್ ಸದ್ಯದಲ್ಲೇ ಕನ್ನಡ ಸೇರಿದಂತೆದೇಶದ ಬಹುತೇಕ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಸೇವೆ ಆರಂಭಿಸಲಿದೆ. ಈ ವಿಚಾರವನ್ನು ನ್ಯಾಷನಲ್ ಇಂಟರ್ನೆಟ್ ಎಕ್ಸ್ ಚೇಂಜ್ ಆಫ್ ಇಂಡಿಯಾ(ಎನ್ಐಎಕ್ಸ್‍ಐ) ಖಚಿತಪಡಿಸಿದೆ.ಈಗಾಗಲೇ . ಹಿಂದಿ,ಬೋಡೋ, ದೋಗ್ರಿ, ಕೊಂಕಣಿ,ಮೈಥಿಲಿ, ಮರಾಠಿ, ನೇಪಾಳಿ,ಸಿಂಧಿ, ಬೆಂಗಾಳಿ, ಗುಜರಾತಿ,ಮರಾಠಿ, ಮಣಿಪುರಿ, ಪಂಜಾಬಿ,ತಮಿಳು, ತೆಲುಗು ಮತ್ತುಉರ್ದುವಿನಲ್ಲಿ ಸದ್ಯ ತನ್ನ ಸೇವೆ ಒದಗಿಸುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ದೇಶದ ಉಳಿದ ಭಾಷೆಗಳಲ್ಲೂ ದೇಶೀಯ ಡೊಮೈನ್ ತನ್ನ ಸೇವೆ ಒದಗಿಸಲಿದೆ ಎಂದು ಎನ್ ಐಎಕ್ಸ್‍ಐನ ಸಿಇಒ ಗೋವಿಂದ್ ಮಾಹಿತಿ ನೀಡಿದ್ದಾರೆ. 3 ದಿನಗಳ ಹಿಂದಿ ಸಮ್ಮೇಳನದಲ್ಲಿ ಸಾವಿರ ಮಂದಿಗೆ . ಡೊಮೈನ್ ನೀಡಲಾಯಿತು. ಜತೆಗೆ, ವೆಬ್‍ಸೈಟ್ ಅನ್ನು ಹೇಗೆ ಸ್ಥಾಪಿಸಬೇಕೆನ್ನುವ ಮಾಹಿತಿ ಒದಗಿಸಲಾಯಿತು. ಎನ್‍ಐಎಕ್ಸ್‍ಐ ಲಾಭರಹಿತ ಸ್ವಾಯತ್ತ ಸಂಸ್ಥೆಯಾಗಿದ್ದು, 2003ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ದೇಶದಲ್ಲಿ ಇಂಟರ್ನೆಟ್‍ ಜನ ಪ್ರಿಯಗೊಳಿಸುವ ಉದ್ದೇಶ ಮಾಹಿತಿಗಳನ್ನು ಪಡೆಯಬಹುದು. ಆದರೆ, ಯುಆರ್‍ಗಳು ಅಥವಾ ವೆಬ್ ವಿಳಾಸಗಳು ಇಂಗ್ಲಿಷ್‍ನಲ್ಲೇ ಇರುತ್ತವೆ.. ನಿಂದ ಈ ಸಮಸ್ಯೆಗೆಪರಿಹಾರ ಸಿಗಲಿದೆ. ಏನಿದು . ಡೊಮೈನ್? . ಅನ್ನು ಇಂಗ್ಲಿಷೇತರ ಭಾಷೆ ಅಂದರೆ ದೇಶದ ಪ್ರಾದೇಶಿಕ ಭಾಷೆ ಮಾತನಾಡುವವರಿಗಾಗಿ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇಂಟರ್ನೆಟ್ ಸೇವೆ ತಲುಪಿಸುವಲ್ಲಿ, ಇಂಟರ್ನೆಟ್ ಬಳಸುವಂತೆ ಪ್ರೊತ್ಸಾಹಿಸುವಲ್ಲಿ ಈ ಡೊಮೈನ್ ಮಹತ್ವದ ಪಾತ್ರವಹಿಸುತ್ತದೆ. ಜತೆಗೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಡಿಜಿಟಲ್ ಡಿವೈಡ್ ಅನ್ನು ಕೊನೆಗಾಣಿಸುವ ಸೇತುವೆಯಾಗಿ ಕೆಲಸ ಮಾಡಲೂ ಇದು ಅನುಕೂಲವಾಗಲಿದೆ. ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿಗಳ ಪ್ರಸಾರಕ್ಕೂ ಇದರಿಂದ ಸೂಕ್ತ ಪ್ರೊತ್ಸಾಹ ಸಿಗಲಿದೆ.