ಬುದ್ಧಿವಂತರ ತಲೆ ದಪ್ಪ ಇರುತ್ತಾ? ಹೌದು! ಅಚ್ಚರಿ ಎನಿಸಿದರೂ ಸತ್ಯ. ಇದನ್ನು ವಿಜ್ಞಾನಿಗಳು ಐನ್‌ಸ್ಟೀನ್ ಮೆದುಳನ್ನು ಅಧ್ಯಯನಿಸಿ ಹೇಳಿದ್ದಾರೆ. ಇತರರಿಗೂ... ಹೌದು! ಅಚ್ಚರಿ ಎನಿಸಿದರೂ ಸತ್ಯ. ಇದನ್ನು ವಿಜ್ಞಾನಿಗಳು ಐನ್‌ಸ್ಟೀನ್ ಮೆದುಳನ್ನು ಅಧ್ಯಯನಿಸಿ ಹೇಳಿದ್ದಾರೆ. ಇತರರಿಗೂ, ಐನ್‌ಸ್ಟೀನ್ ಅವರ ಮೆದುಳಿಗೂ ಒಂದಷ್ಟು ವ್ಯತ್ಯಾಸವಿದೆಯಂತೆ. ಅಂದರೆ ದಪ್ಪವಿದೆಯಂತೆ. ಹಾಗಾಗಿ ಬುದ್ದಿವಂತರ ಮೆದುಳು ದಪ್ಪ ಇರುತ್ತೆ ಅಂತಾರೆ ವಿಜ್ಞಾನಿಗಳು. ಆದರೆ, ಇಲ್ಲಿ ಇನ್ನೊಂದು ವಿಜ್ಞಾನಿ ಗುಂಪಿನ ವಾದವಿದೆ. ಡಾಲ್ಫಿನ್ ಮತ್ತು ವೇಲ್ಸ್ ಮೆದುಳು ಅವುಗಳ ಸೈಜಿನಂತೆಯೇ ಇರುತ್ತದೆಯಂತೆ. ಅಂದರೆ ದಪ್ಪ ಇರುತ್ತದೆಯಂತೆ. ಹೀಗಾಗಿಯೇ ಅವು ತುಂಬಾನೆ ಇಂಟೆಲಿಜೆಂಟ್ ಅಂತಾರೆ ಇವರು. ಆದರೆ ಕಾಗೆ ಮೆದುಳು ತುಂಬಾನೆ ಚಿಕ್ಕದಾಗಿರುತ್ತದೆ. ಇದೂ ಅಸಾಮಾನ್ಯ ಬುದ್ಧಿವಂತಿಕೆ ಹೊಂದಿರುತ್ತದೆಯಲ್ಲಾ ಎನ್ನುವುದು ಈ ಗುಂಪಿನ ಪ್ರಶ್ನೆ. ಹೀಗಾಗಿ ದಪ್ಪ ಮೆದುಳಿನವರು ಕೆಲವೊಮ್ಮೆಯಷ್ಟೇ ತೀರಾ ಬುದ್ಧಿವಂತರಿರಬಹುದು ಎನ್ನುವುದು ಇವರ ವಾದ.