ಫೇಸ್ ಬುಕ್ ಹೊಸ ದಾಖಲೆ: ಒಂದೇ ದಿನದಲ್ಲಿ ಒಂದು ಬಿಲಿಯನ್ ಜನರಿಂದ ಬಳಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ. ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಹೊಸ ದಾಖಲೆ ನಿರ್ಮಿಸಿದೆ. ವಿಶ್ವಾದ್ಯಂತ ಪ್ರತಿ ದಿನ ಒಂದು ಬಿಲಿಯನ್ ಜನರು ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿರುವ ಫೇಸ್ ಬುಕ್ ನ ಸಿಇಒ ಮಾರ್ಕ್ ಝಕರ್ಬರ್ಗ್ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಒಂದು ಬಿಲಿಯನ್ ಬಳಕೆದಾರರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸೋಮವಾರದಂದು ಪ್ರತಿ 7 ಜನರಲ್ಲಿ ಒಬ್ಬರು ಫೇಸ್ ಬುಕ್ ಬಳಕೆ ಮಾಡಿದ್ದಾರೆ ಎಂದು ಮಾರ್ಕ್ ಝಕರ್ಬರ್ಗ್ ಮಾಹಿತಿ ನೀಡಿದ್ದಾರೆ. ಆಧುನಿಕ ಜಗತ್ತಿನ ಅವಕಾಶಗಳನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಸಂಸ್ಥೆ ಪ್ರತಿಯೊಬ್ಬ ವ್ಯಕ್ತಿಗೂ ಧ್ವನಿಯಾಗಿರುತ್ತದೆ. ಸಂಪರ್ಕ ಹೊಂದಿರುವ ಜಗತ್ತು ಎಂದಿಗೂ ಉತ್ತಮವಾಗಿರುತ್ತದೆ, ಫೇಸ್ ಬುಕ್ ನ ಸಮುದಾಯದ ಭಾಗವಾಗಿರುವವರಿಗೆ ಮಾರ್ಕ್ ಝಕರ್ಬರ್ಗ್ ಧನ್ಯವಾದ ಅರ್ಪಿಸಿದ್ದಾರೆ. ಫೇಸ್ ಬುಕ್ ಅತಿ ಹೆಚ್ಚು ನೆಟ್ ಟ್ರಾಫಿಕ್ ಹೊಂದಿರುವ ಜಗತ್ತಿನ ಎರಡನೇ ಜಾಲತಾಣವಾಗಿದೆ.