ಭಾರತದಲ್ಲೀಗ ಮೋಟೋ ಜಿ ಅಲೆ ಮೋಟೋರೋಲಾ ಕಂಪನಿಯ ಮೋಟೋ ಜಿ (ಮೂರನೇ ಜನರೇಷನ್) ಫೋನ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ... ಮೋಟೋರೋಲಾ ಕಂಪನಿಯ ಮೋಟೋ ಜಿ (ಮೂರನೇ ಜನರೇಷನ್) ಫೋನ್‌ಗಳು ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಕಳೆದ ವಾರ ಮೋಟೋರೋಲಾ ಈ ಫೋನ್ ಗಳನ್ನು ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. 4ಜಿ ಎಲ್‌ಇಡಿ ಫೋನ್‌ಗೆನ ಡಿಸ್‌ಪ್ಲೇ 5 ಇಂಚು ಇದೆ. ಮೋಟೋರೋಲಾ ಮೊಬೈಲ್‌ಗೆ ಭಾರತೀಯರು ನೀಡಿದ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದ ಸೂಚಕವಾಗಿ ಮೊದಲ ಬಾರಿಗೆ ಮೋಟೋರೋಲಾ ತಮ್ಮ ಮೋಟೋ ಜಿ - ಮೂರನೇ ಜನರೇಷನ್ ಫೋನ್ ನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಮೋಟೋ ಜಿ ಮೂರನೇ ಜನರೇಷನ್ ಫೋನ್‌ಗಳು ಎರಡು ರೀತಿಯಲ್ಲಿವೆ. ಒಂದರಲ್ಲಿ 1 ಜಿಬಿ ರ್ಯಾಮ್, 8 ಜಿಬಿ ಇಂಟರ್ನಲ್ ಮೆಮೊರಿ ಇದ್ದರೆ ಇನ್ನೊಂದು ರೀತಿಯ ಫೋನ್ ನಲ್ಲಿ 2 ಜಿಬಿ ರ್ಯಾಮ್, 16 ಜಿಬಿ ಇಂಟರ್ನಲ್ ಮೆಮೊರಿ ಇದೆ. ಇದಲ್ಲಿ 1 ಜಿಬಿ ರ್ಯಾಮ್ ಮಾಡೆಲ್‌ಗೆ 11, 999 ರು ಹಾಗೂ 2 ಜಿ ರ್ಯಾಮ್ ಮೊಬೈಲ್‌ಗೆ 12,999 ರು. ಬೆಲೆಯಿದೆ. ಮೋಟೋರೋಲಾ 3ಜಿ ಫೋನ್ ನ ವಿಶೇಷತೆಗಳು 720 ಈ್ಗ 1280 ಪಿಕ್ಸೆಲ್ ರೆಸಲ್ಯೂಷನ್ ಇರರುವ 5 ಇಂಚು ಇನ್‌ಪ್ಲೇನ್ ಸ್ವಿಚ್ಚಿಂಗ್ (ಐಪಿಎಸ್) ಡಿಸ್‌ಪ್ಲೇ. ಡಿಸ್‌ಪ್ಲೇಗೆ ಗೊರಿಲ್ಲಾ ಗ್ಲಾಸ್ 2 ರಕ್ಷಣೆ 2 ಸಿಮ್ ಗಳಿರುವ ಫೋನ್‌ನಲ್ಲಿ ಎರಡೂ ಸಿಮ್‌ಗಳಿಗೆ 4 ಜಿ ಸೌಲಭ್ಯ 64 ಬಿಟ್ ಕ್ವಾಡ್ ಕೋರ್ ಸ್ಟಾಪ್ ಡ್ರಾಗನ್ 410 ಪ್ರೊಸೆಸರ್ ಮೆಮೊರಿ ವರ್ಧಿಸಲು (ಹಿಗ್ಗಿಸಲು ) ಮೈಕ್ರೋ ಎಸ್‌ಡಿ ಆ್ಯಂಡ್ರಾಯ್ಡ್ 5.1 ಆಪರೇಟಿಂಗ್ ಸಿಸ್ಟಂನ್ನು ಮೋಟೋರೋಲಾ ಫೋನ್‌ಗಳಿಗಾಗಿ ಕಸ್ಟಮೈಸ್ ಮಾಡಿರುವ ವೆನಿಲ್ಲಾ ವರ್ಷನ್‌ನಲ್ಲಿ ಮೋಟೋ ಜೀ ಮೂರನೇ ಜನರೇಶನ್ ಕಾರ್ಯವೆಸಗುತ್ತದೆ. ಬಿಳಿ ಹಾಗೂ ಕಪ್ಪು ಬಣ್ಣ ಗಳಲ್ಲಿ ಲಭ್ಯವಾಗುವ ಈ ಫೋನ್ ಆಗಸ್ಟ್ 2ರ ವರೆಗೆ ಹಲವಾರು ಆಫರ್ ನೊಂದಿಗೆ ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ. ಈ ಫೋನ್‌ನೊಂದಿಗೆ ಏರ್‌ಟೆಲ್ 4 ಜಿ ಸಿಮ್ ಉಚಿತವಾಗಿ ಸಿಗುತ್ತದೆ. ಒಂದು ಮೀಟರ್ ಆಳವಿರುವ ನೀರಿನ ಹೊಂಡದಲ್ಲಿ ಫೋನ್ ಬಿದ್ದು ಅಲ್ಲೇ 30 ನಿಮಿಷ ಇದ್ದರೂ ಫೋನ್‌ನೊಳಗೆ ನೀರು ಹೋಗದಂತಿರುವ ವಾಟರ್ ರೆಸಿಸ್ಟೆಂಟ್ ಪವರ್ ಇದಕ್ಕಿದೆ. ಮೋಟೋ ಜಿ ಸೆಕೆಂಡ್ ಜನರೇಷನ್ ಫೋನ್ ಗಿಂತ ಹೆಚ್ಚು ಬ್ಯಾಟರಿ ಬ್ಯಾಕಪ್ ಈ ಫೋನ್‌ಗಿದೆ ಎಂದು ಹೇಳಲಾಗುತ್ತಿದೆ.