ಈಗ ಟ್ವಿಟ್ಟರ್ ನಲ್ಲೂ ತಾಜಮಹಲ್ ೧೭ನೆ ಶತಮಾನದ ತಾಜ್ ಮಹಲ್ ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನಾವರಣ ಮಾಡುವ ಮೂಲಕ ಶನಿವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ೬೯ನೆ ಆಗ್ರಾ: ೧೭ನೆ ಶತಮಾನದ ತಾಜ್ ಮಹಲ್ ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನಾವರಣ ಮಾಡುವ ಮೂಲಕ ಶನಿವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ೬೯ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ತಾಜ್ ಮಹಲ್, ಟ್ವಿಟ್ಟರ್ ಅಕೌಂಟ್ ಹೊಂದಿರುವ ಮೊದಲ ಐತಿಹಾಸಿಕ ಪಾರಂಪರಿಕ ತಾಣವಾಗಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ. ಈ ಪುಟವನ್ನು ಅನಾವರಣ ಮಾಡಿ "ವಿಶ್ವದ ಅದ್ಭುತಗಳಲ್ಲಿ ಒಂದಾದ, ಆಗ್ರಾದಲ್ಲಿರುವ ವಿಶ್ವ ಪಾರರಂಪರಿಕ ತಾಣದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಇದು" ಎಂದು ತಿಳಿಸಿದೆ. ಎರಡು ರೀತಿಯ ಜನರಿದ್ದಾರೆ ಎನ್ನುವ ಈ ಪುಟ "ನನ್ನನ್ನು ಭೇಟಿ ಮಾಡಿ ಅನುಸರಿಸುವ ಜನ ಹಾಗೂ ನನ್ನನ್ನು ಇನ್ನೂ ನೋಡದೆ ಅನುಸರಿಸುವ ಜನ" ಎಂದು ಬರೆದುಕೊಂಡಿದೆ. ಈ ಪುಟ ಅನಾವರಣವಾದ ಒಂದು ಘಂಟೆಯಲ್ಲೇ ಇದನ್ನು ೨೦೦೦ ಕ್ಕಿಂತಲೂ ಹೆಚ್ಚು ಜನ ಅನುಸರಿಸುತ್ತಿದ್ದಾರೆ.