ಭೂಕಂಪದ ಜಾಗದಲ್ಲಿ ಬಂಗಾರದ ಗಣಿ ಇದು ಅಚ್ಚರಿಯ ವಿಷಯವೇ. ಭೂಶಾಸ್ತ್ರಜ್ಞರ ಪ್ರಕಾರ. ಭೂಕಂಪವಾದ ಜಾಗದಲ್ಲಿ ಅಗಾಧವಾದ ಬಂಗಾರದ ಅದಿರು ನಿರ್ಮಾಣವಾಗುತ್ತದೆಯಂತೆ. ಈಗ ನಾವು ಅಗೆಯುತ್ತಿರುವ ಬಂಗಾರದ ಗಣಿಗಳೆಲ್ಲಾ ಭೂಕಂಪದ ಕಾಲದಲ್ಲೇ ನಿರ್ಮಾಣವಾದವು ಎನ್ನುವುದು ತಜ್ಞರ ವಾದ. ಆದರೆ ಈ ಪ್ರಕ್ರಿಯೆಗೆ ಸಾವಿರ ಸಾವಿರ ವರ್ಷಗಳೇ ಬೇಕು ಎಂದು ಹೇಳುತ್ತಾರೆ. ಹೀಗಾಗಿ ಎಷ್ಟೋ ಸಾವಿರ ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಬಂಗಾರದ ನಿಕ್ಷೇಪ ತಯಾರಾಗಿರಬೇಕು ಎಂದು ಹೇಳುತ್ತಾರೆ. ಭೂಕಂಪದ ಸಂದರ್ಭದಲ್ಲಿ ಭೂಮಿ ಬಾಯ್ತೆರೆಯುವ ವೇಗದಲ್ಲೇ ಭೂಮಿ ಮತ್ತೆ ಕೂಡಿಕೊಳ್ಳುವುದಿಲ್ಲ. ಆಗ ಈ ಜಾಗದಲ್ಲಿ ಯಾವುದಾದರೊಂದು ಖನಿಜ ಸೇರಲೇಬೇಕು. ಆ ಸಂದರ್ಭದಲ್ಲೇ ಉತ್ಪತ್ತಿಯಾಗುವ ಖನಿಜವೇ ಬಂಗಾರ ಎಂದು ಸಂಶೋಧಕರು ವಿಶ್ಲೇಷಿಸುತ್ತಾರೆ.