ಪುರುಷರಿಗಾಗಿ "ಏಸಿ ಶೂಸ್' ಪುರುಷರಿಗಾಗಿ ತಯಾರಿಸಲಾದ ಈ ಏರ್ ಕಂಡಿಷನ್ಡ್ ಶೂಗಳು ಎಂದಿಗೂ ನಾರುವುದಿಲ್ಲ. ಏಕೆಂದರೆ ಅದರೊಳಗೆ ಸದಾ ಕಾಲ ತಂಪು... ಪುರುಷರಿಗಾಗಿ ತಯಾರಿಸಲಾದ ಈ ಏರ್ ಕಂಡಿಷನ್ಡ್ ಶೂಗಳು ಎಂದಿಗೂ ನಾರುವುದಿಲ್ಲ. ಏಕೆಂದರೆ ಅದರೊಳಗೆ ಸದಾ ಕಾಲ ತಂಪು ಗಾಳಿಯಾಡುತ್ತದೆ. ಈ ಶೂಗಳೊಳಗೆ ಹೈಡ್ರೋ ಟೆಕ್ನಾಲಜಿ ಬಳಸಲಾಗಿದೆ. ಪಾದಗಳನ್ನು ಸದಾ ಕಾಲ ತಂಪಾಗಿಯೂ, ಸ್ವಚ್ಛವಾಗಿಯೂ ಇಟ್ಟು, ರಿಫ್ರೆಶಿಂಗ್ ಫೀಲ್ ನೀಡುತ್ತದೆ. ಮೇಲ್ಭಾಗದ ಸೋಲ್ ನಲ್ಲಿ ಪುಟ್ಟ ಪುಟ್ಟ ರಂಧ್ರಗಳಿದ್ದು ಅದರ ಮೂಲಕ ತಂಪಾದ ಗಾಳಿ ಪಾದಗಳಿಗೆ ಸೋಕುತ್ತದೆ. ಇದರಲ್ಲಿರುವ ಮೆಂಬ್ರೇನ್ ಗಾಳಿಯನ್ನು ಒಳಬಿಡುತ್ತದೆ. ಆಧರೆ ಮಳೆ ಹನಿಗಳನ್ನು ತಡೆಯುತ್ತದೆ. ಹೀಗಾಗಿ ಶೂ ಎಲ್ಲ ಕಾಲಕ್ಕೂ ಸೂಕ್ತವೆನಿಸುತ್ತದೆ. ವಾಸನೆ ಬೀರುವ ಪಾದಗಳಿಗೆ, ಸಾಕ್ಸ್ ಗಳಿಗೆ ಖಂಡಿತಾ ಮುಕ್ತಿ ಸಿಗುತ್ತದೆ. ಸದ್ಯ 78 ಡಾಲರ್ ಬೆಲೆ ಬಾಳವು ಈ ಬ್ರೀಜ್ ವಾಕ್ ಶೂಗಳನ್ನು ಜಪಾನಿ ಕಂಪನಿ ತಯಾರಿಸಿದೆ. ಸದ್ಯಕ್ಕೆ ಇದು ನಿಮಗೆ ಲಭ್ಯವಿಲ್ಲ. ಇನ್ನೂ ಸ್ವಲ್ಬದಿನ ಕಾಯಲೇಬೇಕು. ಏಕೆಂದರೆ ಭಾರತಕ್ಕಿನ್ನೂ ಈ ಶೂ ಕಾಲಿಟ್ಟಿಲ್ಲ.