ಕ್ಯಾನ್ಸರ್ ಪತ್ತೆಗೂ ಗೂಗಲ್ ಸರ್ಚ್! ಕೇಳಿದ್ದನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದ್ದ ಗೂಗಲ್ ಇನ್ನು ಮುಂದೆ ... ಸ್ಯಾನ್‌ಫ್ರಾನ್ಸಿಸ್ಕೋ: ಕೇಳಿದ್ದನ್ನು ಹುಡುಕಿಕೊಡುವ ಕೆಲಸ ಮಾಡುತ್ತಿದ್ದ ಗೂಗಲ್ ಇನ್ನು ಮುಂದೆ ಜೀವ ಉಳಿಸುವ ಕೆಲಸಕ್ಕೂ ಕೈ ಹಾಕಲಿದೆ! ಗೂಗಲ್ ಸರ್ಚ್ ಎಂಜಿನ್ ಅಂದ್ರೆ ಎಲ್ಲರಿಗೂ ಪ್ರಿಯ. ಅದೇ ಗೂಗಲ್ ಮಾನವ ದೇಹವನ್ನೂ ಸರ್ಚ್ ಮಾಡಿ, ಕ್ಯಾನ್ಸರ್ ಮತ್ತು ಹೃದಯ ರೋಗಗಳ ಮಾಹಿತಿ ಕೊಡುವ ಕೆಲಸ ಮಾಡುವತ್ತ ಚಿಂತನೆ ನಡೆಸುತ್ತಿದೆ. ಈಗಾಗಲೇ ಈ ಬಗ್ಗೆ ಸಂಶೋಧನೆ ಶುರುವಾಗಿದೆ. ಇದರ ಪ್ರಮುಖ ಉದ್ದೇಶವೇ ಈ ಮಾರಕ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು. ಯಾವುದೇ ರೋಗಕ್ಕೆ ನಮ್ಮ ದೇಹ ನೆಲೆಯಾಗುತ್ತಿದೆ ಎನ್ನುವಾಗಲೇ ಹೇದ ಜೈವಿಕ ಕ್ರಿಯೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತವೆ. ಇದೊಂದು ರೀತಿಯಲ್ಲಿ ನಮ್ಮ ದೇಹ ರೋಗದ ಕುರಿತು ನಮಗೆ ನಮಗೆ ಕಳುಹಿಸುವ ಎಚ್ಚರಿಕೆಯ ಸಂದೇಶ. ಬಹುತೇಕ ಕ್ಯಾನ್ಸರ್ , ಹೃದಯಕ್ಕೆ ಸಂಬಂಧಿಸಿದ ರೋಗಗಳ ವಿಚಾರದಲ್ಲಿ ಇದು ಆರಂಭಿಕ ಹಂತದಲ್ಲೇ ಗಮನಕ್ಕೆ ಬಾರದೇ ಹೋಗಬಹುದು. ಇದರಿಂದ ರೋಗ ಉಲ್ಬಣಗೊಂಡಾಗ ಚಿಕಿತ್ಸೆ ಫಲಿಸದೆ ಬಹುತೇಕ ರೋಗಿಗಳು ಸಾವಿಗೀಡಾಗುತ್ತಾರೆ. ಒಂದು ವೇಳೆ ಆರಂಭಿಕ ಹಂತದಲ್ಲೇ ರೋಗ ಲಕ್ಷಣವನ್ನು ಪತ್ತೆ ಹಚ್ಚುವಂತಾದರೆ ಮುಂದೆ ಆಗಬಹುದಾದ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಸ್ಸಿ ಗೂಗಲ್ ಸಂಶೋಧನಾ ವಿಭಾಗವಾದ ಗೂಗಲ್ ಎಕ್ಸ್ ಸಂಶೋಧನೆ ನಡೆಸುತ್ತಿದೆ. ಚಿಕಿತ್ಸೆ ಹೇಗೆ? ರೋಗ ಲಕ್ಷಣ ಪತ್ತೆಗಾಗಿ ಸಂಶೋಧಕರು ನ್ಯಾನೋ ಪಾರ್ಟಿಕಲ್‌ಗಳ (ಸೂಕ್ಷ್ಮಕಣಗಳು) ನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಇವು ಜೀವಕೋಶಗಳ ಮಟ್ಟದಲ್ಲಿ ನಮ್ಮ ದೇಹದಲ್ಲಿ ರೋಗ ಲಕ್ಷಣಗಳನ್ನು ಹುಡುಕುವ ಕೆಲಸ ಮಾಡುತ್ತದೆ. ಇವುಗಳಲ್ಲಿ ಕೆಲವು ಕ್ಯಾನ್ಸರ್‌ಗೆ ತುತ್ತಾದ ಜೀವಕೋಶಗಳಿಗೆ ಅಂಟಿಕೊಂಡರೆ, ಇನ್ನು ಕೆಲವು ರಕ್ತ ನಾಳಗಳಲ್ಲಿ ರಕ್ತಜ ಸಹಜ ಹರಿವೆಗೆ ಅಡ್ಡಿಯಾಗಬಹುದಾದ ಕೊಬ್ಬಿನ ಪದರಗಳನ್ನೂ ಪತ್ತೆ ಹಚ್ಚುತ್ತವೆ. ಮತ್ತೆ ಕೆಲವು ರಕ್ತದಲ್ಲಿರುವ ರಾಸಾಯನಿಕದ ಅಧ್ಯಯನ ನಡೆಸುತ್ತಿರುತ್ತವೆ. ವೈದ್ಯರು ಬಯಸಿದಲ್ಲಿ , ಇವನ್ನು ಒಂದೇ ಕಡೆ ಸೇರಿಸಬಹುದು. ಈ ಕೆಲಸ ಮಾಡುವುದು ವ್ಯಕ್ತಿಯ ಕೈಗೆ ಕಟ್ಟಲಾಗಿರುವ ವಾಚ್‌ನಂಥ ವಿಶೇಷ ಸಾಧನ. ಈ ಸಾಧನ ಸೂಕ್ಷ್ಮ ಕಣಗಳು ಸಂಗ್ರಹಿಸಿದ ಮಾಹಿತಿಗಳನ್ನು ಬಹಿರಂಗ ಪಡಿಸುತ್ತವೆ. ಸದ್ಯ ಈ ಕುರಿತ ಸಂಶೋಧನೆ ಆರಂಭಿಕಹಂತದಲ್ಲಿದೆ ಎಂದು ಗೂಗಲ್ ಹೇಳಿಕೊಂಡಿದೆ. ಇದು ಹೇಗೆ ಸಾಧ್ಯ?