ಶಕ್ತಿಶಾಲಿ ಕ್ರಯೋಜನಿಕ್ ಎಂಜಿನ್ ಪರೀಕ್ಷೆ ಯಶಸ್ವಿ ರತೀಯ ಬಾಹ್ಯಾಕಾಶ ಇಲಾಖೆ ಇಡೀ ಜಗತ್ತನ್ನೇ ಒಮ್ಮೆ ಭಾರತದತ್ತ ತಿರುಗಿ ನೋಡುವ ಹೆಮ್ಮೆಯ ಸಾಧನೆ ಮಾಡಿದೆ... ಬೆಂಗಳೂರು: ಭಾರತೀಯ ಬಾಹ್ಯಾಕಾಶ ಇಲಾಖೆ ಇಡೀ ಜಗತ್ತನ್ನೇ ಒಮ್ಮೆ ಭಾರತದತ್ತ ತಿರುಗಿ ನೋಡುವ ಹೆಮ್ಮೆಯ ಸಾಧನೆ ಮಾಡಿದೆ. ಇದು ಅಂತರಿಕ್ಷ ಜಗತ್ತಿಗೆ ಸಂಬಂಧಿಸಿದ ಸಾಧನೆ. ದೇಶದ ನೂತನ ಹಾಗೂ ಅತ್ಯಂತ ಶಕ್ತಿಶಾಲಿ ಕ್ರಯೋಜನಿಕ್ ಎಂಜಿನ್ ಅನ್ನು 800 ಸೆಕೆಂಡು ಪರೀಕ್ಷೆಗೊಳಪಡಿಸುವ ಮೂಲಕ ಉನ್ನತ ತಂತ್ರಜ್ಞಾನದ ಪರೀಕ್ಷೆಗಳಲ್ಲಿ ಸೈ ಎನಿಸಿಕೊಂಡಿದೆ. ಅತ್ಯಂತ ನೂತನ ತಂತ್ರಜ್ಞಾನದ ಬೃಹತ್ ರಾಕೆಟ್‍ಗೆ ಅಳವಡಿಸಲಾಗುವ ಈ ಕ್ರಯೋಜನಿಕ್ ಎಂಜಿನ್, ಜಿಎಸ್‍ಎಲ್ ವಿ ಮಾರ್ಕ್3 ಉಡಾವಣಾ ವಾಹನಕ್ಕೆ ಬಳಸಲ್ಪಡುತ್ತಿದೆ. ಇದರಲ್ಲಿ 8 ಟನ್ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಹುದಾಗಿದೆ ಎಂಬುದು ವಿಶೇಷ. ಪೂರ್ಣಾವಧಿಯ ಪರೀಕ್ಷೆ ಯಶಸ್ವಿಯಾಗಿ ರುವುದು 2016ರ ಜಿಎಸ್‍ಎಸ್ ವಿ ಮಾರ್ಕ್3 ಯೋಜನೆ ಚಾಲನೆಗೆ ಹೆಚ್ಚಿನ ಆತ್ಮವಿಶ್ವಾಸ ನೀಡಿದಂತಾಗಿದೆ. ಈ ಸಾಧನೆ ಮಾನವ ಸಹಿತ ಚಂದ್ರಯಾನ ಕೈಗೊಳ್ಳುವ ಇಸ್ರೋದ ಯೋಜನೆಗೆ ನೆರವಾಗಲಿದೆ. ಈ ಮೊದಲು ಕೂಡ 2014ರ ಜನವರಿಯಲ್ಲಿ ಜಿಎಸ್‍ಎಲ್ ವಿ ಮಾರ್ಕ್ 2 ರಾಕೆಟ್‍ಗೆ ಕ್ರಯೋಜನಿಕ್ ಎಂಜಿನ್‍ಗಳನ್ನು ಬಳಸಿದ್ದು ಹೌದಾದರೂ, ಅವುಗಳ ಗಾತ್ರ ತುಂಬ ಕಡಿಮೆಯದಾಗಿತ್ತು. ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕ ಏಳುವರ್ಷಗಳಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಭಾರತ ನೆಲದಿಂದ ಭಾರತದ ರಾಕೆಟ್ ಗಳನ್ನೇ ಬಳಸಿ ಭಾರತೀಯ ಗಗನಯಾತ್ರಿಗಳನ್ನು ಕಳಿಸುವ ಹೆಬ್ಬಯಕೆಯನ್ನು ಜಿಎಸ್‍ಎಲ್ ವಿ ಮಾರ್ಕ್3 ಪೂರೈಸಲಿದೆ ಎಂದು ಇಸ್ರೋ ವಿಶ್ವಾಸ ವ್ಯಕ್ತಪಡಿಸಿದೆ. ಕ್ರಯೋಜನಿಕ್ ಯಂತ್ರದ ಪರೀಕ್ಷೆ ಯಶಸ್ವಿಯಾಗಿ ನೆರವೇರಿಸಿದ ಭಾರತ - 800 ಸೆಕೆಂಡ್‍ಗಳ ಪೂರ್ಣಪ್ರಮಾಣದ ಪರೀಕ್ಷೆ ನಡೆಸಿದ ಇಸ್ರೋ - ಜಿಎಸ್‍ಎಲ್ ವಿ ಮಾರ್ಕ್3 ವಾಹನಕ್ಕೆ ಅಳವಡಿಸಲಾಗುವ ಎಂಜಿನ್ - 2016ರ ಜಿಎಸ್‍ಎಲïವಿ ಉಡಾವಣೆಗೆ ಹೆಚ್ಚಿದ ಆತ್ಮವಿಶ್ವಾಸ - ಎಂಟು ಟನ್ ತೂಕದ ಉಪಗ್ರಹ ಹೊತ್ತೊಯ್ಯುವ ಸಾಮಥ್ರ್ಯ ನೀಡಲಿರುವ ಕ್ರಯೋಜನಿಕ್ ಎಂಜಿನ್ - ಆಮ್ಲಜನಕ ಮತ್ತು ಜಲಜನಕ ದ್ರವಗಳನ್ನು ಬಳಸುವ ಕ್ರಯೋಜನಿಕ್ ಎಂಜಿನ್ - ಭಾರತೀಯರಿಗೆ ಅಸಾಧ್ಯ ಎಂಬ ವಿದೇಶಿಯರ ನಂಬಿಕೆ ಸುಳ್ಳುಮಾಡಿದ ಇಸ್ರೋ