ಜೂ.22 ರಂದು ಇಸ್ರೋದಿಂದ 20 ಉಪಗ್ರಹ ಉಡಾವಣೆ ಜೂ.22 ರಂದು ಭಾರತ 20 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಚೆನ್ನೈ: ಜೂ.22 ರಂದು ಭಾರತ 20 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋ ನೀಡಿರುವ ಮಾಹಿತಿ ಪ್ರಕಾರ ಶ್ರೀಹರಿ ಕೋಟಾದಿಂದ 20 ಉಪಗ್ರಹಗಳನ್ನು ಹೊತ್ತೊಯ್ಯಲಿರುವ ಪಿಎಸ್ ಎಲ್ ವಿ ಉಪಗ್ರಾಹಕವನ್ನು ಬೆಳಿಗ್ಗೆ 9 :25 ಉಡಾವಣೆಯಾಗಲಿವೆ. ಉಡಾವಣೆಯಾಗಲಿರುವ 20 ಉಪಗ್ರಹಗಳ ಪೈಕಿ ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷಿಯಾದ ಉಪಗ್ರಹಗಳು ಇವೆ ಎಂದು ತಿಳಿದುಬಂದಿದೆ. ಜೂ.20 ರಂದು ಉಡಾವಣೆಯಾಗಲಿರುವ ರಾಕೆಟ್ 1,288 ಕೆಜಿ ಪೇಲೋಡ್ ನ್ನು ಹೊಂದಿರಲಿದ್ದು 26 ನಿಮಿಷಗಳಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. ಕಾರ್ಟೋಸ್ಯಾಟ್ ಉಪಗ್ರಹ ಉಡಾವಣೆಯಿಂದ ಕಾರ್ಟೊಗ್ರಾಫಿಕ್, ನಗರ, ಗ್ರಾಮೀಣ, ಕರಾವಳಿ ಭೂಮಿಯ ಬಳಕೆ, ನೀರು ಸರಬರಾಜು ಕ್ಷೇತ್ರಗಳಿಗೆ ಉಪಯೋಗವಾಗಲಿದೆ. ಇನ್ನು 1.5 ಕೆ ಜಿ ತೂಕದ ಸತ್ಯಾಂಬ ಸ್ಯಾಟ್ ಉಪಗ್ರಹ ಹಸಿರುಮನೆ ಅನಿಲಗಳ ಡೇಟಾ ಬಗ್ಗೆ ಮಾಹಿತಿ ನೀಡಲಿದೆ.