ವಾಟ್ಸಾಪ್ ನಲ್ಲಿ ಜಿಫ್ ಸೌಲಭ್ಯ ಸಾಮಾಜಿಕ ಸಂಪರ್ಕ ಆಪ್ ಆದ ವಾಟ್ಸಪ್ ನಲ್ಲಿ ಇನ್ನು ಮುಂದೆ ಬಳಕೆದಾರರು ಗ್ರಾಫಿಕ್ಸ್ ಇಂಟರ್’ಚೇಂಜ್ ... ನವದೆಹಲಿ: ಸಾಮಾಜಿಕ ಸಂಪರ್ಕ ಆಪ್ ಆದ ವಾಟ್ಸಪ್ ನಲ್ಲಿ ಇನ್ನು ಮುಂದೆ ಬಳಕೆದಾರರು ಗ್ರಾಫಿಕ್ಸ್ ಇಂಟರ್’ಚೇಂಜ್ ಫಾರ್ಮೆಟ್ (ಜಿಫ್) ಫೈಲುಗಳನ್ನು ಬಳಸುವ ಸೌಲಭ್ಯವನ್ನು ಆರಂಭಿಸಲಿದೆ. ತ್ವರಿತ ಸಂದೇಶ ಸೇವೆಯನ್ನೊದಗಿಸುವ ವಾಟ್ಸಾಪ್ ನ ಹೊಸ ಐಒಎಸ್ ಬೀಟಾ ಆವೃತಿಯು ಜಿಫ್() ಫೈಲುಗಳನ್ನು ಕೂಡಾ ಕಳುಹಿಸುವ ಸೌಲಭ್ಯವನ್ನು ಒದಗಿಸಲಿದೆಯೆಂದು ‘ದಿ ನೆಕ್ಸ್ಟ್ ವೆಬ್’ ಪತ್ರಿಕೆ' ವರದಿ ಮಾಡಿದೆ. ವರದಿಯ ಪ್ರಕಾರ ಆ ಜಿಫ್ ಫೈಲುಗಳು ಸ್ವಯಂ ತೆರೆಯುವುದು (ಆಟೋಪ್ಲೇ) ಹಾಗೂ ಬಳಕೆದಾರರು ತಮ್ಮ ಸಂಭಾಷಣೆಗಳಲ್ಲಿ (ಚಾಟ್) ಅವುಗಳನ್ನು ಬಳಸಿಕೊಳ್ಳಬಹುದು. ವಾಟ್ಸಪ್ ನಲ್ಲಿ ಈಗಾಗಲೇ ಕರೆ ಮಾಡುವ ಸೌಲಭ್ಯ, ಫೋಟೋ/ವಿಡಿಯೋ, ಸಂದೇಶಗಳನ್ನ ಕಳುಹಿಸುವ ಸೌಲಭ್ಯವನ್ನು ಹೊಂದಿದೆ.