44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿ ಸ್ಯಾಮ್ ಸಂಗ್ ದಕ್ಷಿಣ ಕೊರಿಯಾದ ಟಿವಿ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ 44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿದ್ದು ಕ್ವಾಂಟಮ್ ಡಾಟ್ ಈ ಪೈಕಿ ಹೊಚ್ಚ ಹೊಸ ಮಾದರಿಯಾಗಿದೆ. ನವದೆಹಲಿ: ದಕ್ಷಿಣ ಕೊರಿಯಾದ ಟಿವಿ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ 44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿದ್ದು ಕ್ವಾಂಟಮ್ ಡಾಟ್ ತಂತ್ರಜ್ಞಾನದ ಡಿಸ್ ಪ್ಲೇ ಹೊಂದಿರುವ ಈ ಪೈಕಿ ಹೊಸ ಮಾದರಿಯಾಗಿದೆ. ಕ್ವಾಂಟಮ್ ಡಾಟ್ ತಂತ್ರಜ್ಞಾನದಿಂದ ವೀಕ್ಷಕರಿಗೆ ಈ ಹಿಂದೆಂದೂ ಸಿಗದ ಅನುಭವವನ್ನು ನೀಡಲಿದೆ.ಪ್ರೀಮಿಯಂ ವಿಭಾಗದಲ್ಲಿ ಸೂಪರ್ ಅಲ್ಟ್ರಾ ಹೈ ಡೆಫಿನಿಷನ್(ಎಸ್ ಯು ಹೆಚ್ ಡಿ), ಮಧ್ಯಮ ವಿಭಾಗದಲ್ಲಿ ಸ್ಮಾರ್ಟ್ ಟಿವಿ ಹಾಗೂ ಅಗ್ಗದ ದರದಲ್ಲಿ ಜಾಯ್ ಬಿಟ್ ಟಿವಿಗಳನ್ನು ಸ್ಯಾಮ್ ಸಂಗ್ 44 ವಿಧದ ಹೊಸ ಟಿವಿ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. 48 ಇಂಚಿನಿಂದ 88 ಇಂಚಿನವರೆಗಿನ ಎಸ್ ಯು ಹೆಚ್ ಡಿ ಶ್ರೇಣಿಯ ಟಿವಿಯ ಬೆಲೆ 1,79,900 ರಿಂದ 23,99,900 ವರೆಗಿದೆ. ಇನ್ನು ಸ್ಮಾರ್ಟ್ ಟಿವಿ ಹಾಗೂ ಜಾಯ್ ಬಿಟ್ ಟಿವಿಗಳಲ್ಲಿ ಹೊಸ ಫಿಚಾರ್ ಗಳಿದ್ದು ನೋಡುಗರಿಗೆ ವಿಭಿನ್ನ ರೀತಿಯ ಅನುಭವ ನೀಡಲಿದೆ. 32 ಇಂಚಿನಿಂದ 78 ಇಂಚಿನ ವರೆಗಿನ ಸ್ಮಾರ್ಟ್ ಟಿವಿಯ ಬೆಲೆ 34,500 ದಿಂದ 7,03,900 ವರೆಗೆಗಿದ್ದರೆ, ಜಾಯ್ ಬಿಟ್ ಶ್ರೇಣಿಯ 32 ಇಂಚಿನ ಟಿವಿಯ ಬೆಲೆ 27,900 ರೂಪಾಯಿಗಳಷ್ಟಿದ್ದು, 49 ಇಂಚಿನ ಟಿವಿಯ ಬೆಲೆ 69,500 ರೂಪಾಯಿಗಳಾಗಿದೆ.