ಟ್ವಿಟರ್ ನ್ನು ಹಿಂದಿಕ್ಕಿದ ಇನ್ಸ್ಟಾಗ್ರಾಮ್! ಫೇಸ್ ಬುಕ್ ಒಡೆತನದ ಫೋಟೋ ಶೇರಿಂಗ್ ವೆಬ್ ಸೈಟ್ ಟ್ವಿಟರ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಕಳೆದ 9 ತಿಂಗಳಲ್ಲಿ 100 ಮಿಲಿಯನ್ ಹೊಸ ಗ್ರಾಹಕರನ್ನು ಪಡೆದಿದೆ. ವಾಷಿಂಗ್ ಟನ್: ಫೇಸ್ ಬುಕ್ ಒಡೆತನದ ಫೋಟೋ ಶೇರಿಂಗ್ ವೆಬ್ ಸೈಟ್ ಟ್ವಿಟರ್ ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಕಳೆದ 9 ತಿಂಗಳಲ್ಲಿ 100 ಮಿಲಿಯನ್ ಹೊಸ ಗ್ರಾಹಕರನ್ನು ಪಡೆದಿದೆ. ಟ್ವಿಟರ್ ಗೆ ಪ್ರಸ್ತುತ 316 ಮಿಲಿಯನ್ ಸಕ್ರಿಯ ಬಳಕೆದಾರರಿದ್ದು, ಇನ್ಸ್ಟಾಗ್ರಾಮ್ 400 ಮಿಲಿಯನ್ ಬಳಕೆದರರನ್ನು ಹೊಂದಿದೆ. 400 ಮಿಲಿಯನ್ ಬಳಕೆದಾರರ ಪೈಕಿ ಶೇ.75 ರಷ್ಟು ಜನರು ಅಮೆರಿಕಾದಿಂದ ಹೊರಗೆ ವಾಸಿಸುತ್ತಿದ್ದಾರೆ ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿದೆ. "ಕಳೆದ 5 ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ನ ಬಿಡುಗಡೆ ಮಾಡಿದಾಗ 400 ಮಿಲಿಯನ್ ಬಳಕೆದಾರರನ್ನು ಹೊಂದುವುದು ಸವಾಲಿನ ವಿಷಯವಾಗಿತ್ತು. ಹೊಸ ಗ್ರಾಹಕರ ಪೈಕಿ ಅರ್ಧದಷ್ಟು ಜನರು ಯೂರೋಪ್, ಏಷ್ಯಾ, ಬ್ರೆಜಿಲ್, ಜಪಾನ್, ಇಂಡೋನೇಶಿಯಾದ ನಾಗರಿಕರಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರತಿದಿನ 80 ಮಿಲಿಯನ್ ಫೋಟೋಗಳು ಹಂಚಿಕೆಯಾಗುತ್ತವೆ.