ನೋಕಿಯಾ ನೇಪಥ್ಯಕ್ಕೆ ತುಂಬಾ ಏನಲ್ಲ... ಹತ್ತೇ ವರ್ಷಗಳ ಹಿಂದೆ ಮೊಬೈಲ್ ಹ್ಯಾಂಡ್... ತುಂಬಾ ಏನಲ್ಲ... ಹತ್ತೇ ವರ್ಷಗಳ ಹಿಂದೆ ಮೊಬೈಲ್ ಹ್ಯಾಂಡ್ ಸೆಟ್‌ಗಳ ಇಡೀ ಸಾಮ್ರಾಜ್ಯವನ್ನು ಆಳುತ್ತಿದ್ದ 'ನೋಕಿಯಾ' ಬ್ರಾಂಡ್ ನೇಪಥ್ಯಕ್ಕೆ ಸರಿದಿದೆ. ಇದರ ಮಾಲೀಕತ್ವ ಹೊಂದಿರುವ ಮೈಕ್ರೋಸಾಫ್ಟ್ ಕಂಪನಿ, ನೋಕಿಯಾ ಲೂಮಿಯಾ ಎಂಬ ಹೆಸರಿನಲ್ಲಿ ಬರುತ್ತಿದ್ದ ಹ್ಯಾಂಡ್‌ಸೆಟ್‌ಗಳನ್ನು ಇನ್ನು ಮುಂದೆ ಮೈಕ್ರೋಸಾಫ್ಟ್ ಲೂಮಿಯಾ ಎಂಬ ಹೆಸರಿನಡಿ ಬಿಡುಗಡೆಗೊಳಿಸುವುದಾಗಿ ಹೇಳಿದೆ. ಒಂದು ಕಾಲದಲ್ಲಿ 'ಕನೆಕ್ಟಿಂಗ್ ಪೀಪಲ್‌' ಎಂಬ ಘೋಷವಾಕ್ಯದಡಿ, ಮೊಬೈಲ್ ಮಾರುಕಟ್ಟೆಯ ಚಕ್ರವರ್ತಿಯಾಗಿ ಮೆರೆದಿದ್ದ ನೋಕಿಯಾ ಈಗ ವಸ್ತುಶಃ ತೆರೆಯ ಮರೆಗೆ ಸರಿದಿದೆ. -43,200 ಶತಕೋಟಿ, ನೋಕಿಯಾ ಕಂಪನಿಯನ್ನು ಮೈಕ್ರೋಸಾಫ್ಟ್ ಖರೀದಿಸಿದ ಮೊತ್ತ ಹಿನ್ನೋಟ