ಗೂಗಲ್ ನ ಹೊಸ ಇಮೇಲ್ ಸೇವೆ 'ಇನ್ಬಾಕ್ಸ್' ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ.. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಗೂಗಲ್ "ಇನ್ಬಾಕ್ಷ್" () ಎನ್ನುವ ಹೊಸ ಈಮೈಲ್ ಸೇವೆಯನ್ನು ಬುಧವಾರ ಪ್ರಾರಂಭಿಸಿದೆ. ಇದು ಈಮೇಲ್ ಗಳನ್ನು ಸರಿಯಾಗಿ ವರ್ಗೀಕರಿಸಲು, ನಿಯೋಜಿತ ಕೆಲಸಗಳ ವಿವರಗಳ, ವಿಮಾನ ಪ್ರಾಯಣದ ವಿವರಗಳ, ಬರಬೇಕಾದ ಪ್ಯಾಕೇಜ್ಗಳ ವಿವರಗಳನ್ನು ವಿಶಿಷ್ಟವಾಗಿ ಪ್ರದರ್ಶಿಸುವ, ಬಳಗೆದಾರಗಿ ಹೆಚ್ಚು ಉಪಯೋಗವುಳ್ಳ ಸೌಲಭ್ಯಗಳೊಂದಿಗೆ ಕಾಣಿಸಿಕೊಂಡಿದೆ. ಗೂಗಲ್ ತನ್ನ ಬಳೆಕೆದಾರರಿಗೆ ಈ ಹೊಸ ಸೇವೆಯನ್ನು ಉಪಯೋಗಿಸಲು ಆಹ್ವಾನವನ್ನು ಕಳುಹಿಸಲಿದೆ. ಜಿಮೇಲ್ ಬಳಕೆದಾರರು @. ಗೆ ಮಿಂಚಂಚೆ ಕಳುಹಿಸುವ ಮೂಲಕವೂ ಈ ಸೇವೆಯ ಆಹ್ವಾನ ಪಡೆಯಬಹುದಾಗಿದೆ. ೨೦೦೪ ರಲ್ಲಿ ಹೊರಬಂದ ಜಿಮೇಲ್ ಸೇವೆಯ ಜೊತೆ ಜೊತೆಗೆ ಈ ಸೇವೆಯನ್ನು ಬಳಸಬಹುದಾಗಿದ್ದು, ಈ ಸೇವೆ ಆಂಡ್ರೈಡ್ ಸ್ಮಾರ್ಟ್ ಫೋನ್ ಮತ್ತು ಐ ಫೋನ್ ಗಳಿಗೂ ಲಭ್ಯ. ಜಿಮೇಲ್ ನಲ್ಲಿ ಈಗ ಇರುವ ಸೌಲಭ್ಯಗಳನ್ನು ಉತ್ತಮ ಪಡಿಸಿರುವುದಲ್ಲದೆ, ಹೊಸ ಸೌಲಭ್ಯಗಳನ್ನು ಒದಗಿಸಲಾಗಿದದೆ. ಈ ಹೊಸ ಸೇವೆ ಜಿಮೇಲ್ ಗಿಂತ ಬಹಳ ವಿಭಿನ್ನ ಎನ್ನಲಾಗಿದೆ. ಈ ಹೊಸ ಸೇವೆಯ ಘೋಷಣೆಯ ನಂತರ ನಾಸ್ದಾಕ್ ನಲ್ಲಿ ಗೊಗಲ್ ಸಂಸ್ಥೆಯ ಶೇರುಗಳು ೧.೭% ಮೇಲೇರಿವೆ.