ವಾಟ್ಸಪ್ ಪ್ರಪಂಚದ ಅತೀ ಹೆಚ್ಚು ಖ್ಯಾತಿ ಪಡೆದ ಆಂಡ್ರಾಯ್ಡ್ ಆ್ಯಪ್ ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಹಿರಿಮೆಗೆ ಮತ್ತೊಂದು ಗರಿ ಪ್ರಾಪ್ತವಾಗಿದ್ದು, ವಾಟ್ಸಪ್ ಇದೀಗ ಪ್ರಪಂಚದ ಆಂಡ್ರಾಯ್ಡ್ ಬಳಕೆದಾರರ ಅತೀ ಹೆಚ್ಚು ಖ್ಯಾತಿ ಗಳಿಸಿದ ಆ್ಯಪ್ ಎಂಬ ಹಿರಿಮೆಗೆ ಪಾತ್ರವಾಗಿದೆ... ನವದೆಹಲಿ: ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಹಿರಿಮೆಗೆ ಮತ್ತೊಂದು ಗರಿ ಪ್ರಾಪ್ತವಾಗಿದ್ದು, ವಾಟ್ಸಪ್ ಇದೀಗ ಪ್ರಪಂಚದ ಆಂಡ್ರಾಯ್ಡ್ ಬಳಕೆದಾರರ ಅತೀ ಹೆಚ್ಚು ಖ್ಯಾತಿ ಗಳಿಸಿದ ಆ್ಯಪ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಸ್ಮಾರ್ಟ್ಫೋನ್ ಬಳಕೆದಾರರ ನೆಚ್ಚಿನ ಸಾಮಾಜಿಕ ಮೆಸೆಜಿಂಗ್ ಆ್ಯಪ್ ವಾಟ್ಸ್ ಆಪ್ ಇದೀಗ ಜಗತ್ತಿನ ಅರ್ಧದಷ್ಟು ರಾಷ್ಟ್ರಗಳಲ್ಲಿ ಅಂದರೆ ಸುಮಾರು 109 ರಾಷ್ಟ್ರಗಳಲ್ಲಿ ಗ್ರಾಹಕರ ಜನಪ್ರಿಯ ಆ್ಯಪ್ ಆಗಿ ಹೊರಹೊಮ್ಮಿದೆ. ಡಿಜಿಟಲ್ ಮಾರ್ಕೆಟ್ ಇಂಟಿಲಿಜೆನ್ಸಿ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಈ ವರದಿ ಹೊರಬಿದ್ದಿದ್ದು, ಸಂಸ್ಥೆಯ ಸಂಶೋಧಕ ಕಂಪನಿ ಸಿಮಿಲರ್ ವೆಬ್ ಈ ವರದಿ ಮಾಡಿದೆ. 187 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ ಸಿಮಿಲರ್ ವೆಬ್ 109 ರಾಷ್ಟ್ರಗಳಲ್ಲಿ ವಾಟ್ಸ್ ಆಪ್ ಮುಂಚೂಣಿಯಲ್ಲಿದ್ದು, ಶೇಕಡಾ 55.6 ರಷ್ಟು ಜಗತ್ತಿನಾದ್ಯಂತ ತನ್ನ ಜಾಲ ವಿಸ್ತರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತ ಸೇರಿದಂತೆ ಬ್ರೆಜಿಲ್, ಮೆಕ್ಸಿಕೊ, ಬ್ರಿಟನ್, ರಷ್ಯಾ ಮತ್ತು ದಕ್ಷಿಣ ಅಮೆರಿಕದ ಕೆಲ ದೇಶಗಳಲ್ಲಿ ವಾಟ್ಸ್ ಆಪ್ ಬಳಕೆ ಗಣನೀಯವಾಗಿ ಹೆಚ್ಚಿದೆ. ಇನ್ನು ವಾಟ್ಸಪ್ ನಂತರದ ಸ್ಥಾನದಲ್ಲಿ ಫೇಸ್ಬುಕ್ ಮೆಸೆಂಜರ್ ಇದ್ದು, 49 ಈ ಆ್ಯಪ್ ದೇಶಗಳಲ್ಲಿ ಜನಪ್ರಿಯವಾಗಿದೆ. ಇವುಗಳನ್ನು ಹೊರತುಪಡಿಸಿ ವೈಬರ್ ಜಗತ್ತಿನ 10% ರಷ್ಟು ಗ್ರಾಹಕ ಪ್ರಿಯವಾಗಿದೆ. ಲೈನ್, ಉಯ್ಚಾಟ್, ಟೆಲಿಗ್ರಾಮ್ಂತಹ ಮೆಸೆಂಜರ್ಗಳು ಚೀನಾ, ಇರಾಕ್ ಮತ್ತು ಜಪಾನ್ನಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿವೆ. ಪ್ರಸ್ತುತ ಫೇಸ್ಬುಕ್ ಒಡೆತನದಲ್ಲಿರುವ ವಾಟ್ಸ್ ಆಪ್ ಮೆಸೆಂಜರ್ 94.8% ರಷ್ಟು ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರನ್ನು ಹೊಂದಿದೆ.