ಹೆಗಲಲ್ಲಿ ಕೂತು ಟೊಮ್ಯಾಟೋ ತಿನ್ನಿಸುವ ಯಂತ್ರ! ಜಪಾನ್‌ನ ಒಂದು ಕಂಪನಿ ತುತ್ತುಣಿಸುವ ಅಲ್ಲ ಟೊಮ್ಯಾಟೋ ತಿನ್ನಿಸುವ ಯಂತ್ರವೊಂದನ್ನು ಕಂಡುಹಿಡಿದಿದೆ... ಅಮ್ಮ ತುತ್ತು ನೀಡಿದರೆ ಮಾತ್ರ ಒಂದಷ್ಟು ತಿನ್ನುವ ಮಕ್ಕಳನ್ನು ನೋಡಿದ್ದೇವೆ. ದೊಡ್ಡವರಾದಾಗ ಆಹಾರವನ್ನು ಕೈಯಲ್ಲೆತ್ತಿ ಅದನ್ನು ಬಾಯಿಗಿಡಲು ಕೂಡಾ ಉದಾಸೀನ ಮಾಡುವವರು ಕೆಲವರಾದರೆ, ಕೆಲಸದ ಬ್ಯುಸಿಯಲ್ಲಿ ಆಹಾರ ತಿನ್ನವುದಕ್ಕೂ ಪುರಸೋತ್ತಿಲ್ಲ ಎಂದು ಗೊಣಗಾಡುವವರೂ ನಮ್ಮಲ್ಲಿದ್ದಾರೆ. ಕೆಲಸದೆಡೆಯಲ್ಲಿ ಯಾರಾದರೂ ತುತ್ತುಣಿಸಿದರೆ ಎಷ್ಟು ಒಳ್ಳೆಯದು ಅಲ್ವಾ? ಎಂದು ನೀವು ಬಯಸಿದರೆ ಅದಕ್ಕೆ ಇಲ್ಲಿದೆ ಪರಿಹಾರ. ಜಪಾನ್‌ನ ಒಂದು ಕಂಪನಿ ತುತ್ತುಣಿಸುವ ಅಲ್ಲ ಟೊಮ್ಯಾಟೋ ತಿನ್ನಿಸುವ ಯಂತ್ರವೊಂದನ್ನು ಕಂಡುಹಿಡಿದಿದೆ. ಈ ಯಂತ್ರದ ಹೆಸರು . ಈ ಯಂತ್ರವನ್ನು ಬೆನ್ನಿನಲ್ಲಿ ಕೂರಿಸಿದರೆ, ಅದು ನಮಗೆ ಟೊಮ್ಯಾಟೋ ತಿನ್ನಿಸುತ್ತದೆ. ಟೊಮ್ಯಾಟೋ ಉತ್ಪನ್ನಗಳನ್ನು ನಿರ್ಮಿಸುವ ಕಾಂಗೋಂ ಎಂಬ ಕಂಪನಿ ಈ ರೀತಿ ಹಗುರವಾಗ ಹ್ಯುಮನೋಯ್ಡ್ ರೋಬೋಟ್‌ನ್ನು ತಯಾರಿಸಿದೆ. ಮನುಷ್ಯ ಓಡುವಾಗ ಈ ಯಂತ್ರ ಬಾಯಿಗೆ ಒಂದೊಂದೇ ಟೊಮ್ಯಾಟೋವನ್ನಿಟ್ಟು ತಿನ್ನಿಸುತ್ತದಂತೆ. ಅಥ್ಲೀಟ್‌ಗಳು ಓಡುವಾಗ ಅವರಿಗೆ ಪೋಷಕಾಂಶಯುಕ್ತ ಆಹಾರಗಳನ್ನು ನೀಡಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಯಂತ್ರವನ್ನು ತಯಾರಿಸಲಾಗಿದೆ ಎಂಬುದು ಕಂಪನಿ ಹೇಳಿಕೊಂಡಿದೆ. ಈ ಯಂತ್ರದ ರೂಪವನ್ನು ನೋಡಿದರೆ ನಿಮಗೆ 'ಈಗ' ಸಿನಿಮಾದ ನೊಣ ನೆನಪಾಗದೇ ಇರದು.