5,299 ರು.ಗೆ ಏಸಸ್ ನಿಂದ ಹೊಸ ಸ್ಮಾರ್ಟ್ ಫೋನ್ ತೈವಾನ್ ಮೂಲದ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಏಸಸ್ ಬಜೆಟ್ ಶ್ರೇಣಿಯ 2 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3ಜಿ ಸೇವೆಯುಕ್ತ 4.5 ಇಂಚಿನ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು 5, 299 ರುಗಳಿಗೆ ಇ-ಮಾರುಕಟ್ಟೆ ಮೂಲಕ ಲಭ್ಯವಿದೆ... ನವದೆಹಲಿ: ತೈವಾನ್ ಮೂಲದ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಏಸಸ್ ಬಜೆಟ್ ಶ್ರೇಣಿಯ 2 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 3ಜಿ ಸೇವೆಯುಕ್ತ 4.5 ಇಂಚಿನ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳು 5, 299 ರುಗಳಿಗೆ ಇ-ಮಾರುಕಟ್ಟೆ ಮೂಲಕ ಲಭ್ಯವಿದೆ. ಝೆನ್ ಫೋನ್ ಗೋ 4.5 2ನೇ ತಲೆಮಾರಿನ ZB452KG ಸರಣಿಯ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್, ಸ್ಮ್ಯಾಪ್ ಡೀಲ್, ಅಮೆಜಾನ್, ಪೇಟಿಎಂ ಮತ್ತು ಶಾಪ್ ಕ್ಲೂಸ್ ನಂತಹ ಇ-ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆ ಹೇಳಿದೆ. 2 ಬಗೆಯಲ್ಲಿ ಈ ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, 0.3 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಹೊಂದಿರುವ ಫೋನ್ ಗಳು 5,299ಕ್ಕೆ ಲಭ್ಯವಿದ್ದರೆ, 2 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ ಹೊಂದಿರುವ ಫೋನ್ ಗಳು ರು.5,699ಕ್ಕೆ ಲಭ್ಯವಿದೆ. ತಾಂತ್ರಿಕ ವಿಚಾರಕ್ಕೆ ಬರುವುದಾದರೆ 1.2 ಕ್ವಾಡ್ ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್, 8 ಜಿಬಿ ಮೆಮೋರಿ(ಮೈಕ್ರೋ ಎಸ್ ಡಿ-64 ಜಿಬಿ ವರೆಗೆ ಎಕ್ಸ್ ಪ್ಯಾಂಡೆಬಲ್), 4.5 ಇಂಚಿನ ಡಿಸ್ ಪ್ಲೇ, ಆ್ಯಂಡ್ರಾಯ್ಡ್ 5.1 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಕಡಿಮೆ ಬೆಳಕಿನಲ್ಲೂ ಪರಿಣಾಮಕಾರಿಯಾಗಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಈ ಸ್ಮಾರ್ಟ್ ಫೋನ್ ಗೆ ಇದ್ದು, ಪಿಕ್ಸೆಲ್ ಮಾಸ್ಟರ್ ತಂತ್ರಜ್ಞಾನದ ಮೂಲಕ 16 ವಿವಿಧ ವಿಶೇಷ ಕ್ಯಾಮೆರಾ ಮೋಡ್ ಗಳನ್ನು ಈ ಫೋನ್ ಗೆ ನೀಡಲಾಗಿದೆ. ಒಟ್ಟು ಆರು ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ ಎಂದು ಸಂಸ್ಥೆ ಹೇಳಿದೆ.