ಬಾಂಗ್ಲಾ ಜನರು ಕ್ಲಿಕ್ಕಿಸಿದ್ರು ಜಗತ್ತಿನ ಅತೀ ದೊಡ್ಡ ಸೆಲ್ಫಿ ಬಾಂಗ್ಲಾದೇಶದಲ್ಲಿ ಸುಮಾರು 1,151 ಜನರು... ಢಾಕಾ: ಬಾಂಗ್ಲಾದೇಶದಲ್ಲಿ ಸುಮಾರು 1,151 ಜನರು ಒಟ್ಟಿಗೆ ನಿಂತು ನೋಕಿಯಾ ಲೂಮಿಯಾ 730 ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿ ದಾಖಲೆ ಸೃಷ್ಟಿಸಿದ್ದಾರೆ. ಹೀಗೆ ತೆಗೆದ ಸೆಲ್ಫಿ ಜಗತ್ತಿನ ಅತೀ ದೊಡ್ಡ ಸೆಲ್ಫಿ ಎಂಬ ಹೆಗ್ಗಳಿಕೆ ಪಡೆದಿದ್ದು ಗಿನ್ನಿಸ್ ದಾಖಲೆಗೆ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 5 ಮೆಗಾ ಪಿಕ್ಸೆಲ್ ಮಿಡ್ ರೇಂಜ್ ಇರುವ ವಿಂಡೋಸ್ ಫೋನ್‌ನಲ್ಲಿ ತೆಗೆದಿರುವ ಈ ಫೋಟೋದಲ್ಲಿ ಎಷ್ಟು ಜನರಿದ್ದಾರೆ ಎಂಬುದರ ಬಗ್ಗೆ ಇದೀಗ ಗಣತಿ ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಮೈಕ್ರೋಸಾಫ್ಟ್ ಲೂಮಿಯಾ ಬಂಗ್ಲಾದೇಶ್ ಎಂಬ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಈಗಾಗಲೇ ಈ ಪೇಜ್‌ಗೆ 20,000ಕ್ಕಿಂತಲೂ ಹೆಚ್ಚು ಲೈಕ್‌ಗಳು ಸಿಕ್ಕಿವೆ. 3.37 ಮಿಲಿಯನ್ ರೀ ಟ್ವೀಟ್ ಮತ್ತು 2.01 ಫೇವರಿಟ್ ಆಗಿರುವ ಎಲೆನ್ ಡೆ ಜೆನೆರ್ಸ್ ಅವರ ಆಸ್ಕರ್ ಸೆಲ್ಫಿ, ಸೆಲ್ಫಿಗಳಲ್ಲಿ ದಾಖಲೆ ಸೃಷ್ಟಿಸಿದ ಸೆಲ್ಫಿಯಾಗಿದೆ. ಇದೀಗ ಬಾಂಗ್ಲಾದೇಶದಲ್ಲಿ ತೆಗೆದಿರುವ ದೊಡ್ಡ ಸೆಲ್ಫಿ ಈ ದಾಖಲೆಯನ್ನು ಮುರಿಯಲಿದೆಯೆ? ಎಂಬುದನ್ನು ಕಾದುನೋಡಬೇಕಾಗಿದೆ.