ಬಫರಿಂಗ್ ಇಲ್ಲದೆ ವಿಡಿಯೋ ನೋಡಿ! ಇಂಟರ್‌ನೆಟ್ ವೇಗ ಹೆಚ್ಚುತ್ತಲೇ ಇದೆ. ಒಂದು ಕಾಲದಲ್ಲಿ 256 ಕೆಬಿ ವೇಗವೇ ದೊಡ್ಡ ಮಾತಾಗಿತ್ತು. ಈಗ 1 ಎಂಬಿ, 2 ಎಂಬಿ ವೇಗ ಸಾಮಾನ್ಯವಾಗಿದೆ. ಹಾಗೆಯೇ ವಿಡಿಯೋ ರೆಸಲ್ಯೂಷನ್ ಕೂಡ ಹೆಚ್ಚಿದೆ. ಬಹುತೇಕ ಟಿವಿ ಚಾನೆಲ್‌ಗಳನ್ನು ಇಂಟರ್‌ನೆಟ್‌ನಲ್ಲಿ ನೋಡಬಹುದಾಗಿದೆ. ಪರಿಣಾಮವಾಗಿ ವಿಡಿಯೋ ಅಥವಾ ಚಾನೆಲ್‌ಗಳನ್ನು ನೋಡಬೇಕೆಂದರೆ ಅದು ಲೋಡ್ ಆಗುವ ತನಕ ಕಾಯಬೇಕು. ಇದನ್ನು ಪರಿಹರಿಸಲೆಂದೇ ವಿಡಿಯೋ ಹೊಸ ಫಾರ್ಮಾಟ್ (ಮಾದರಿ) ಬರುತ್ತಿದೆಯಂತೆ. ಎಚ್.265 ಎಂಬ ಮಾದರಿಯಲ್ಲಿ 1080ಪಿ ಎಚ್‌ಡಿ ವಿಡಿಯೋವನ್ನು ಈಗಿನಕ್ಕಿಂತ ಅರ್ಧದಷ್ಟು ಕಡಿಮೆ ಡಾಟಾದಲ್ಲಿ ಬಿತ್ತರಿಸಬಹುದಂತೆ. ಇದರಿಂದಾಗಿ ಉತ್ತಮ ಗುಣಮಟ್ಟದ ವಿಡಿಯೋವನ್ನು ಕಡಿಮೆ ಡಾಟಾ ಬಳಕೆ ಮತ್ತು ಬಫರಿಂಗ್ ಇಲ್ಲದೇ ಬೇಗನೇ ನೊಡುವ ಅವಕಾಶ ಲಭ್ಯವಾಗಲಿದೆ. ವಿಶೇಷವಾಗಿ ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಉತ್ತಮ ಗುಣಮಟ್ಟ ವಿಡಿಯೋ ನೋಡಲು ಇದು ಅತ್ಯಂತ ಸಹಾಯಕಾರಿ.