ಅನ್‌ಲೈಕ್ ಪ್ರಪೋಸ್ ಫೇಸ್‌ಬುಕ್‌ನಲ್ಲಿ ಪ್ರೇಮನಿವೇದನೆ ಮಾಡ್ಕೋಬೇಕು ಅಂದುಕೊಂಡಿದ್ದೀರಾ? ಅಂಥ ದುಃಸ್ಸಾಹಸಕ್ಕೆ ಕೈಹಾಕಬೇಡಿ. ಯಾಕೆಂದರೆ ಸಮೀಕ್ಷೆಯೊಂದರ ಪ್ರಕಾರ ಸಾಮಾಜಿಕ ತಾಣ ಬಳಸುವ ಶೇ.50ರಷ್ಟು ಮಂದಿ ಇಂಥ ಪ್ರೇಮನಿವೇದನೆಯನ್ನು ಇಷ್ಟಪಡುವುದಿಲ್ಲವಂತೆ! ಬಹುತೇಕರು ನೇರಾನೇರ ಪ್ರಮೇನಿದೇನೆಯೇ ಇಷ್ಟ ಎಂದಿದ್ದಾರಂತೆ. ಹಾಗಂತ ನೀವೇನೂ ಬೇಸರ ಮಾಡಿಕೊಳ್ಳಬೇಡಿ. ಯಾಕೆಂದರೆ ಈ ಸಮೀಕ್ಷೆ ನಡೆದಿರುವುದು ಇಂಗ್ಲೆಂಡ್‌ನಲ್ಲಿ.