ಗ್ಯಾಜೆಟ್ ಗುಂಗು ನೀವು ಒಂದು ಮೊಬೈಲ್ ತೆಗೆದುಕೊಳ್ಳಬೇಕು ಅಂದುಕೊಂಡಿರುತ್ತೀರಿ. ಆದರೆ, ದರ ಜಾಸ್ತಿ ಅಂತ ಸುಮ್ಮನಾಗಿರುತ್ತೀರಿ... ನೀವು ಒಂದು ಮೊಬೈಲ್ ತೆಗೆದುಕೊಳ್ಳಬೇಕು ಅಂದುಕೊಂಡಿರುತ್ತೀರಿ. ಆದರೆ, ದರ ಜಾಸ್ತಿ ಅಂತ ಸುಮ್ಮನಾಗಿರುತ್ತೀರಿ. ಆಮೇಲೆ ಅದರ ಬಗ್ಗೆ ಮರೆತೇಬಿಟ್ಟಿರುತ್ತೀರಿ. ನಂತರ ಆ ಮೊಬೈಲ್‌ನ ದರ ಸದ್ದಿಲ್ಲದೇ ಕಡಿಮೆಯಾಗಿರುತ್ತದೆ. ಅಂಥ 10 ಗ್ಯಾಜೆಟ್‌ಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಈ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ದರ ಭಾರಿ ಪ್ರಮಾಣದಲ್ಲಿ ಇಳಿದಿದೆ. ಐಫೋನ್ 5ಎಸ್ ಈ ಮೊಬೈಲ್ ಮಾರುಕಟ್ಟೆಗೆ ಬಂದಾಗ ಆರಂಭಿಕ ಮಾದರಿಗೆ 53,500 ಇತ್ತು. ಈಗ ಅದೇ ಮೊಬೈಲ್ ದರ 49,499 ಆಗಿದೆ. 16ಜಿಬಿ ಇಂಟರ್ನಲ್ ಮೆಮೊರಿ ಹೊಂದಿದ್ದು, ಐಒಎಸ್ 7, 8 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದೆ. ಗ್ಯಾಲಕ್ಸಿ ನೋಟ್ 3 ಸ್ಯಾಮ್‌ಸಂಗ್‌ನ ಹೈಎಂಡ್ ಪೋನ್ ಇದು. ಬಿಡುಗಡೆಯಾದಾಗ 49,900 ಇತ್ತು. ಒಂದೇ ತಿಂಗಳಲ್ಲಿ 2000 ದರ ಇಳಿಕೆಯಾಗಿತ್ತು. ಈಗ ಆನ್‌ಲೈನ್‌ನಲ್ಲಿ 43,999ಗೆ ಈ ಫೋನ್ ಲಭ್ಯವಿದೆ. ಲುಮಿಯಾ 1020 ಬಹುಶಃ ಅತ್ಯಂತ ದೊಡ್ಡ ಪ್ರಮಾಣದಲ್ಲಿ ದರ ಕಡಿತವಾಗಿದ್ದು ಈ ಮೊಬೈಲ್‌ನದು. ನೋಕಿಯಾ ಲೂಮಿಯಾ ಕ್ಯಾಮೆರಾ ಫೋನ್ ಮಾರುಕಟ್ಟೆಗೆ ಭಾರಿ ನಿರೀಕ್ಷೆಯೊಂದಿಗೆ ಪ್ರವೇಶಿಸಿತ್ತು. ಆಗ ಇದರ ದರ ರು. 49,990. ಆದರೆ ಈಗ ರು. 12,000 ದಷ್ಟು ಇಳಿಕೆಯಾಗಿ ರು. 37,990ಕ್ಕೆ ದೊರೆಯುತ್ತಿದೆ! 4.5 ಇಂಚು ಟಚ್‌ಸ್ಕ್ರೀನ್, ವಿಂಡೋಸ್ ಆಪರೇಟಿಂಗ್ ಸಿಸ್ಟಂ, 32 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. ಐಫೋನ್ 5ಸಿ ಆ್ಯಪಲ್ ಕಂಪನಿ ಮೊಬೈಲ್ ದರಗಳನ್ನು ಇಳಿಸೋದೇ ತುಂಬಾ ಕಡಿಮೆ. ಸಾಮಾನ್ಯವಾಗಿ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುತ್ತಿದ್ದಂತೆ ಹಳೇ ಮೊಬೈಲ್ ಸ್ಥಗಿತಗೊಳಿಸುವುದು ಆ್ಯಪಲ್ ಕಂಪನಿ ಸ್ಟೈಲ್. ಆದರೆ ಇತ್ತೀಚೆಗೆ ಬಿಡುಗಡೆಯಾದ ಐಫೋನ್ 5ಎಸ್ ಮತ್ತು 5ಸಿ ಎರಡರ ದರವನ್ನೂ ಇಳಿಸಿದೆ. ಮೊದಲು 5ಸಿಗೆ 41,900 ಇತ್ತು. ಈಗ 37,499 ಆಗಿದೆ. 16 ಜಿಬಿ ಇಂಟರ್ನಲ್ ಮೆಮೊರಿ, 4 ಇಂಚು ಸ್ಕ್ರೀನ್ ಹೊಂದಿದೆ. ಎಚ್‌ಟಿಸಿ 1 ಡ್ಯುಯೆಲ್ ಸಿಮ್ ಎಚ್‌ಟಿಸಿ ಒನ್ ಮಾರುಕಟ್ಟೆಯಲ್ಲಿ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅದಕ್ಕಾಗಿ ಎಟ್‌ಟಿಸಿ ಕಂಪನಿ ಡ್ಯುಯೆಲ್ ಸಿಮ್ ಮಾದರಿಯನ್ನು ಮಾರಕುಟ್ಟೆಗೆ ಪರಿಚಯಿಸಿತು. ಆದರೆ ಅದೂ ಗ್ರಾಹಕರನ್ನು ಆಕರ್ಷಿಸಲು ಯಶಸ್ವಿಯಾಗಿಲ್ಲ. ಈ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿದಾಗ ಇದ್ದ ದರಕ್ಕಿಂತ 17,333 ಡಿಸ್ಕೌಂಟ್‌ನೊಂದಿಗೆ 39,275ಕ್ಕೆ ದೊರೆಯುತ್ತಿದೆ. 4.7 ಇಂಚು ಎಚ್‌ಡಿ ಸ್ಕ್ರೀನ್, 32ಜಿಬಿ ಇಂಟರ್ನಲ್ ಮೆಮೊರಿ, 2ಜಿಬಿ ರ್ಯಾಮ್ ಹೊಂದಿದೆ. ಎಕ್ಸ್‌ಪೀರಿಯಾ ಝೆಡ್1 ಈ ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಿದಾಗ 44,990 ದರವಿತ್ತು. ಈಗ 33,481 ಲಭ್ಯವಿದೆ. 5 ಇಂಚು ಎಚ್‌ಡಿ ಸ್ಕ್ರೀನ್, 2.2 ಗಿಗಾಹರ್ಟ್ಸ್ ಕ್ವಾಡ್ ಕೋರ್ ಪ್ರೊಸೆಸರ್, 2ಜಿಬಿ ರ್ಯಾಮ್ ಮತ್ತು 3000ಎಂಎಎಚ್ ಬ್ಯಾಟರಿ ಹೊಂದಿದೆ. ಐಪ್ಯಾಡ್ 4 ಐಪ್ಯಾಡ್ ಏರ್ ಬಂದನಂತರ ಆ್ಯಪಲ್ ಕಂಪನಿ ಐಪ್ಯಾಡ್ 4 ಮಾದರಿಯನ್ನು ಸ್ಥಗಿತಗೊಳಿಸಿದೆ. ಆದರೂ ಸಾಕಷ್ಟು ಆನ್‌ಲೈನ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಇದು ಲಭ್ಯವಿದೆ. ರು. 5000 ಡಿಸ್ಕೌಂಟ್‌ನೊಂದಿಗೆ ಆರಂಭಿಕ ಮಾದರಿಯ ಐಪ್ಯಾಡ್ 4 ಈಗ 28,099 ದರಕ್ಕೆ ಲಭ್ಯವಿದೆ. 9.7 ಇಂಚು ರೆಟಿನಾ ಸ್ಕ್ರೀನ್, 16 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. ನೆಕ್ಸಸ್ 7 ಗೂಗಲ್ ಕಂಪನಿಯ ಟ್ಯಾಬ್ಲೆಟ್ ನೆಕ್ಸಸ್ 7 ಭಾರತದ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂಥ ಆಕರ್ಷಣೆ ಗಳಿಸಲು ಯಶಸ್ವಿಯಾಗಿಲ್ಲ. ಪರಿಣಾಮವಾಗಿ ಬಿಡುಗಡೆಯಾದಾಗ ಇದ್ದ ದರಕ್ಕಿಂತ ರು. 6000 ಡಿಸ್ಕೌಂಟ್‌ನೊಂದಿಗೆ ರು. 9,999ಕ್ಕೆ ಈಗ ಲಭ್ಯವಿದೆ. ಇದು 7 ಇಂಚು ಸ್ಕ್ರೀನ್, 16 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. ಎಲ್‌ಜಿ ಜಿ2 ಈ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾದಾಗ 41,999 ಇತ್ತು. ಈಗ 32,999ಕ್ಕೆ ಲಭ್ಯವಿದೆ. ಈ ಮೊಬೈಲ್ 5.2 ಇಂಚು ಎಚ್‌ಡಿ ಸ್ಕ್ರೀನ್, 2.2 ಕ್ವಾಡ್ ಕೋರ್ ಪ್ರೊಸೆಸರ್, 13 ಮೆಗಾಪಿಕ್ಸೆಲ್ ಕ್ಯಾಮೆರಾ, 16 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಝೆಡ್ ಅಲ್ಟ್ರಾ 6.4 ಇಂಚು ಎಚ್‌ಡಿ ಸ್ಕ್ರೀನ್ ಹೊಂದಿರುವ ಸೋನಿ ಝೆಡ್ ಅಲ್ಟ್ರಾ ಫ್ಯಾಬ್ಲೆಟ್ ಮಾರುಕಟ್ಟೆಗೆ ಬಿಡುಗಡೆಯಾದಾಗ 46,999 ದರವಿತ್ತು. ಈಗ ಆನ್‌ಲೈನ್‌ನಲ್ಲಿ ಇದು ರು. 12,000 ಡಿಸ್ಕೌಂಟ್‌ನೊಂದಿಗೆ ರು. 34,999ಕ್ಕೆ ಲಭ್ಯವಿದೆ. 2.2 ಗಿಗಾಹರ್ಟ್ಸ್ ಪ್ರೊಸೆಸರ್, 2 ಜಿಬಿ ರ್ಯಾಮ್, 16ಜಿಬಿ ಆಂತರಿಕ ಮೆಮೊರಿ ಹೊಂದಿದೆ. - ವಕ್ರದಂತ