ಫೇಸ್‌ಬುಕ್‌ನಲ್ಲೂ ಹ್ಯಾಶ್‌ಟ್ಯಾಗ್ ಟ್ವೀಟರ್ ಬಳಕೆದಾರರಿಗೆ ಹ್ಯಾಶ್‌ಟ್ಯಾಗ್ ಚಿರಪರಿಚಿತ. ಇದೇ ಪ್ರಯೋಗವನ್ನು ಫೇಸ್‌ಬುಕ್‌ಗೂ ತರಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಟ್ಯಾಗಿಂಗ್ ಇರುವುದು ಎಲ್ಲರಿಗೂ ತಿಳಿದಿದೆ. ಬಹುತೇಕ ಸಮಯಗಳಲ್ಲಿ ನಿಮಗೆ ಇರಿಟೇಟಿಂಗ್ ಕೂಡ ಆಗಿರುತ್ತೆ. ಆದರೆ ಈ ಹ್ಯಾಶ್‌ಟ್ಯಾಗ್ ಖಂಡಿತ ಅಸಹನೀಯವಾಗಲಾರದು. ನೀವು ಚರ್ಚಿಸುತ್ತಿರುವ ವಿಷಯವೊಂದಕ್ಕೆ ಜಾಗತಿಕ ಮನ್ನಣೆ ನೀಡುವ ಉದ್ದೇಶದಿಂದ ಹ್ಯಾಶ್‌ಟ್ಯಾಗ್ ಆರಂಭಿಸಲಾಗಿದೆ. ಈ ಮೊದಲು ಟ್ವೀಟರ್‌ನಲ್ಲಿ ಮೋದಿ ಎಂದು ಹ್ಯಾಶ್‌ಟ್ಯಾಗ್ ಮಾಡಿ ಏನಾದರೂ ಟ್ವೀಟಿಸಿದ್ದರೆ, ಇದೇ ವಿಚಾರದಲ್ಲಿ ಜಾಗತಿಕವಾಗಿ ಎಷ್ಟು ಟ್ವೀಟ್ ಆಗಿದೆ ಎಂಬ ಲೆಕ್ಕ ಸಿಗುತ್ತಿತ್ತು. ಇದಲ್ಲದೇ ಗೂಗಲ್‌ಸರ್ಚ್ ಅಥವಾ ಟ್ವೀಟರ್ ಸರ್ಚ್‌ನಲ್ಲಿಯೇ ಎಲ್ಲ ಟ್ವೀಟ್‌ಗಳನ್ನು ನೋಡುವ ಅವಕಾಶ ಇರುತ್ತಿತ್ತು.ಈಗ ಇದೇ ಪ್ರಯೋಗಕ್ಕೆ ಫೇಸ್‌ಬುಕ್ ಮುಂದಾಗಿದೆ. ಯಾವುದೇ ಒಂದು ಸಾರ್ವಜನಿಕ ವಿಚಾರದ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚಿಸುತ್ತಿದ್ದರೆ, ಸ್ಟೇಟಸ್ ಹಾಕುತ್ತಿದ್ದರೆ, ಅದರಲ್ಲಿ ಣ ಸಂಕೇತ ನಮೂದಿಸಿದರೆ ಹ್ಯಾಶ್‌ಟ್ಯಾಗ್ ಆಗುತ್ತದೆ. ಟ್ವೀಟರ್‌ನ ಕೆಲ ಸವಲತ್ತುಗಳನ್ನು ಇಲ್ಲಿಯೂ ನೀಡುವ ಮೂಲಕ ಸಾಮಾಜಿಕ ತಾಣದ ಚಕ್ರಾಧಿಪತಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಫೇಸ್‌ಬುಕ್ ಈ ಕೆಲಸಕ್ಕೆ ಮುಂದಾಗಿದೆ. ಇದು ಕೇವಲ ಅಕ್ಷರಗಳ ಸ್ಟೇಟಸ್‌ಗೆ ಸೀಮಿತವಾಗದೇ ಫೋಟೋಗಳಿಗೂ ಹ್ಯಾಶ್‌ಟ್ಯಾಗ್ ಮಾಡಬಹುದಂತೆ.