ಸಿಂಗಾಪುರದ ಉಪಗ್ರಹಗಳ ಉಡಾವಣೆ: ರಾಷ್ಟ್ರಪತಿ, ಪ್ರಧಾನಿಯಿಂದ ಇಸ್ರೋ ತಂಡಕ್ಕೆ ಅಭಿನಂದನೆ ಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತ ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ನವದೆಹಲಿ: ಸ್ಪೇಸ್ ಲಾಂಚ್ ಮಾರ್ಕೆಟಿಂಗ್ ಅಡಿಯಲ್ಲಿ ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಡಿ.16 ರಂದು ತನ್ನ ಪಿಎಸ್ಎಲ್ ವಿ-ಸಿಎ) ಮೂಲಕ ಸಿಂಗಾಪುರದ 6 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಸಿಂಗಾಪುರದ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋ ಸಾಧನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಪಿಎಸ್ಎಲ್ ವಿ-ಸಿ 29 ಯಶಸ್ವೀ ಉಡಾವಣೆಯಾಗಿ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಮೈಕ್ರೋ ಉಪಗ್ರಹ(ಸೂಕ್ಷ್ಮ ಉಪಗ್ರಹ) ಹಾಗೂ ನ್ಯಾನೋ ಉಪಗ್ರಹಗಳೊಂದಿಗೆ ಸಿಂಗಾಪುರದ ಪ್ರಥಮ ವಾಣಿಜ್ಯ ಭೂ ಸರ್ವೇಕ್ಷಣಾ ಉಪಗ್ರಹ -1 ನ್ನೂ ಸಹ ಉಡಾವಣೆ ಮಾಡಲಾಗಿದ್ದು ಭಾರತದ ಬಾಹ್ಯಾಕಾಶ ಸಾಮರ್ಥ್ಯ ಮತ್ತಷ್ಟು ಹೆಚ್ಚಿದೆ. ಸಿಂಗಪುರದ 6 ಉಪಗ್ರಹದ ಉಡಾವಣೆಯಿಂದಾಗಿ ಭಾರತಕ್ಕೆ 26 ಮಿಲಿಯನ್ ಯುರೋಗಳಷ್ಟು ಲಾಭ ಬರಲಿದ್ದು, ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ಈ ವರೆಗೂ 15 ಮಿಲಿಯನ್ ಡಾಲರ್ ಹಾಗೂ 80 ಮಿಲಿಯನ್ ಯುರೋಗಳನ್ನು ಗಳಿಸಿದೆ.