ಹಿರಿಯರಿಗಿಲ್ಲ ಇಂಟರ್‌ನೆಟ್ ಗೊಡವೆ, ಅಂತರ್ಜಾಲ ಬಳಕೆಯಲ್ಲಿ ಯುವಕರೇ ಮುಂದು ಆಂಡ್ರಾಯ್ಡ್ ಮೊಬೈಲ್ ಸೆಟ್ ಗಳು ಭಾರತಕ್ಕೆ ಲಗ್ಗೆ ಇಟ್ಟ ನಂತರ ಇಂಟರ್ ನೆಟ್ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿತ್ತು. ಆದರೆ ಟೆಲ್ನೋರ್ ಗ್ರೂಪ್ ನಡೆಸಿದ... ಆಂಡ್ರಾಯ್ಡ್ ಮೊಬೈಲ್ ಸೆಟ್ ಗಳು ಭಾರತಕ್ಕೆ ಲಗ್ಗೆ ಇಟ್ಟ ನಂತರ ಇಂಟರ್ ನೆಟ್ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿತ್ತು. ಆದರೆ ಟೆಲಿನಾರ್ ಗ್ರೂಪ್ ನಡೆಸಿದ ಸಂಶೋಧನೆಯಲ್ಲಿ ಆಘಾತಕಾರಿ ಅಂಶವೊಂದು ಬಹಿರಂಗಗೊಂಡಿದ್ದು, ಭಾರತದಲ್ಲಿ 50 ವರ್ಷದ ಮೇಲ್ಪಟ್ಟವರು ಶೇ. 7ರಷ್ಟು ಮಾತ್ರ ಇಂಟರ್ ನೆಟ್ ಬಳಸುತ್ತಿದ್ದಾರೆ ಎಂದು ತಿಳಿಸಿದೆ. ಸರಿ ಸುಮಾರು 45.61 ಮಿಲಿಯನ್ ಜನರು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಈ ಸಂಶೋಧನೆ ಮೂಲಕ ತಿಳಿದ ವಿಷಯವೆಂದರೆ 50 ದಾಟಿದ ಭಾರತೀಯ ವೃದ್ಧರು ಇಂಟರ್ ನೆಟ್ ಬಳಕೆಯಲ್ಲಿ ತಾತ್ಸಾರ ಹೊಂದಿದ್ದಾರೆ ಎಂಬುದು. ಮೊಬೈಲ್ ಗಳಲ್ಲಿ ಇಂಟರ್ ನೆಟ್ ಬಳಕೆ ಹೆಚ್ಚು ಸಂಕೀರ್ಣವಾಗಿದೆ ಎಂದು ಶೇ. 24ರಷ್ಟು ಮಂದಿ ಹೇಳಿದ್ದರೆ. ಮತ್ತೆ ಶೇ. 29ರಷ್ಟು ಮಂದಿ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಸುವುದಕ್ಕೆ ಯಾವುದೇ ವಿಶೇಷ ಕಾರಣಗಳಿಲ್ಲ ಎಂದು ಹೇಳಿದ್ದಾರೆ. ಯಾವ ಪೀಳಿಗೆ ತಂತ್ರಜ್ಞಾನ ಜತೆ ಬೆಳೆದಿಲ್ಲವೋ ಹಾಗೂ ತಂತ್ರಜ್ಞಾನ ಕೌಶಲ್ಯಗಳನ್ನು ಸುಲಭವಾಗಿ ಅವಳಡಿಸಿಕೊಳ್ಳುವ ಸ್ಥಿತಿಯಲ್ಲಿಲ್ಲವೊ ಅವರು ಆನ್ಲೈನ್ ಜತೆ ಸುಲಭವಾಗಿ ಸಂವಹಿಸಲು ಸಾಧ್ಯವಿಲ್ಲ ಎಂದು ಅಧ್ಯಯನ ಹೇಳಿದೆ. ಮತ್ತೊಂದೆಡೆ 2017ರ ವೇಳೆ ಏಷ್ಯಾದ ಫೆಸಿಪಿಕ್ ಪ್ರದೇಶಗಲ್ಲಿ ಮೊಬೈಲ್ ಇಂಟರ್ ನೆಟ್ ಬಳಕೆ ದ್ವಿಗುಣಗೊಳ್ಳಲಿದ್ದು, 65ರ ಹರೆಯ ಹಾಗೂ ಅದನ್ನು ಮೀರಿದ ಜನರು ಇಂಟರ್ನೆಟ್ ಬಳಕೆಯಲ್ಲಿನ ಸಂಖ್ಯೆ ಗಣನೀಯವಾಗಿ ಬೆಳೆಯುವ ನಿರೀಕ್ಷೆಯೂ ಇದೆ. ಆನ್ಲೈನ್ ಮೂಲಕ ಬಿಲ್ ಪಾವತಿ, ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳು ಹಾಗೂ ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳಿಗಾಗಿ ಯುವ ಜನಾಂಗ ತಂತ್ರಜ್ಞಾನಕ್ಕೆ ಹೆಚ್ಚು ಅವಲಂಬಿತವಾಗಿದೆ ಎಂದು ವರದಿಯಲ್ಲಿ ಹೇಳಿದೆ. ಸಂಶೋಧನೆ ಪ್ರಕಾರ, 50 ವರ್ಷದ ಮೇಲ್ಪಟ್ಟವರು ಮೊಬೈಲ್ ಇಂಟರ್ ನೆಟ್ ಬಳಸುವುದರಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಈ ಭಾಗದಲ್ಲಿ ಶೇ. 24ರಷ್ಟು ಜನರು ಇಂಟರ್ ನೆಟ್ ಬಳಸುತ್ತಾರೆ. ಇದೇ ವೇಳೆ ಶೇ. 2 ರಷ್ಟು ಇಂಟರ್ ನೆಟ್ ಬಳಸುವ ಮೂಲಕ ಬಾಂಗ್ಲಾದೇಶ ಕೊನೆಯ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸಂಸ್ಥೆಗಳು ಮೊಬೈಲ್ ಫೋನ್ ಗಳ ನಿರ್ಮಾಣದಲ್ಲಿ ಹೊಸ ಹೆಜ್ಜೆ ಇಟ್ಟಿವೆ. ಹಾಂಡ್ ಸೆಟ್ ಗಳಲ್ಲಿ ದೊಡ್ಡದಾದ ಐಕಾನ್ ಮತ್ತು ಬಟನ್ ಗಳನ್ನು ನೀಡುವ ಮೂಲಕ ಮೊಬೈಲ್ ಗಳಲ್ಲಿ ಇಂಟರ್ ನೆಟ್ ಬಳಕೆಯನ್ನು ಸರಳ ಮಾಡಿಕೊಡಲಿವೆ.