ಇನ್ಮುಂದೆ ವಾಟ್ಸಾಪ್‌ನಲ್ಲಿ ಸಂದೇಶ ನೋಡಿದ್ದಾರೊ ಇಲ್ಲವೊ ಅಂತ ಗೊತ್ತಾಗುತ್ತೆ! ನಾವು ಇನ್ನೊಬ್ಬರಿಗೆ ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಿದಾಗ ಅದನ್ನು ಅವರು ಆ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೇ? ನವದೆಹಲಿ: ನಾವು ಇನ್ನೊಬ್ಬರಿಗೆ ವಾಟ್ಸಾಪ್‌ನಲ್ಲಿ ಸಂದೇಶವನ್ನು ಕಳುಹಿಸಿದಾಗ ಅದನ್ನು ಅವರು ಆ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೇ? ಎಂಬುದು ಈಗ ತಿಳಿದುಕೊಳ್ಳಬಹುದು. ಇದೀಗ ಅಪ್‌ಡೇಟ್ ಆಗಿರುವ ವಾಟ್ಸಾಪ್ ಆವೃತ್ತಿಯಲ್ಲಿ ಸಂದೇಶ ಕಳುಹಿಸಿದ ಕೂಡಲೇ ಅದನ್ನು ಆ ವ್ಯಕ್ತಿಗಳು ನೋಡಿದ್ದರೆ ಆ ಸಂದೇಶದ ಕೆಳಗೆ ಟಿಕ್ ಮಾರ್ಕ್ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ವಾಟ್ಸಾಪ್‌ನ ಈ ವಿಶೇಷತೆ ಐಓಎಸ್, ಆ್ಯಂಡ್ರಾಯ್ಡ್, ವಿಂಡೋಸ್, ಬ್ಲಾಕ್‌ಬೆರ್ರಿ 10 ಮತ್ತು ಸಿಂಬಿಯನ್ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ. ಸಂದೇಶವನ್ನು ಓದಿದ್ದಾರೆ ಎನ್ನುವ ಈ ನೋಟಿಫಿಕೇಶನ್ ಕೇವಲ ಪರಸ್ಪರ ವ್ಯಕ್ತಿಗಳಿಬ್ಬರ ನಡುವಿನ ಚಾಟ್‌ನಲ್ಲಿ ಮಾತ್ರವಲ್ಲ ಗ್ರೂಪ್ ಚಾಟ್‌ನಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅಂದರೆ ಚಾಟಿಂಗ್ ಸಂದೇಶಗಳಲ್ಲಿ ಸಂದೇಶವನ್ನು ಓದಿದ ಕೂಡಲೇ ಡಬಲ್ ಟಿಕ್ ಐಕಾನ್ ನೀಲಿ ಬಣ್ಣಕ್ಕೆ ತಿರುಗುತ್ತದೆ . ಈ ಹಿಂದೆ ನಾವು ಕಳುಹಿಸಿದ ಸಂದೇಶ ಆ ಕಡೆಯಿರುವ ವ್ಯಕ್ತಿ ಸ್ವೀಕರಿಸಿದ ಕೂಡಲೇ ಡಬಲ್ ಟಿಕ್ ಕಾಣಿಸುತ್ತಿತ್ತು. ಡಬಲ್ ಟಿಕ್ ಆದರೂ ಆ ವ್ಯಕ್ತಿ ಸಂದೇಶವನ್ನು ಓದಿದ್ದಾರೆಯೇ? ಇಲ್ಲವೋ ಎಂಬುದು ತಿಳಿಯುತ್ತಿರಲಿಲ್ಲ. ಆದರೆ ಇದೀಗ ವಾಟ್ಸಾಪ್‌ನ ಈ ವಿಶೇಷತೆಯಿಂದಾಗಿ ಲಾಸ್ಟ್ ಸೀನ್ ಹೈಡ್ ಮಾಡಿದ್ದರೂ ವ್ಯಕ್ತಿಗಳು ಸಂದೇಶವನ್ನು ಓದಿದ್ದಾರೋ ಬಿಟ್ಟಿದ್ದಾರೋ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದಾಗಿದೆ.