ಸ್ಯಾಮ್‌ಸಂಗ್ ಸ್ಮಾರ್ಟ್ ಲರ್ನಿಂಗ್ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಎಂಎಸ್‌ಸಿ ವಿಭಾಗದ ಸ್ಯಾಮ್‌ಸಂಗ್ ಸ್ಮಾರ್ಟ್ ಲರ್ನಿಂಗ್ ಕಾರ್ಯಕ್ರಮವನ್ನು ಘೋಷಿಸಿದೆ. ವಿದ್ಯಾರ್ಥಿಗಳಿಗೆ ತರಗತಿ ಕಲಿಕೆಗೆ ಪೂರಕವಾಗಿ ಅತ್ಯುತ್ಕೃಷ್ಟ ಕಲಿಕಾ ಪರಿಕರಗಳನ್ನು ಒದಗಿಸುವ ಆವಿಷ್ಕಾರಿ ಯೋಜನೆ ಇದಾಗಿದೆ. ಸಿಬಿಎಸ್‌ಸಿ ಪಠ್ಯಕ್ರಮ ಅಭ್ಯಸಿಸುತ್ತಿರುವ 1ರಿಂದ 10ನೇ ತರಗತಿಯ 70 ದಶಲಕ್ಷ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿರುವ 4.5 ದಶಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.