ಹೊಸ ಕಿಟ್ ಕ್ಯಾಟ್ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಹೊಸ ಕಿಟ್‌ಕ್ಯಾಟ್ ಸವಿಯಲು ತಯಾರಾಗಬಹುದು... ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಹೊಸ ಕಿಟ್‌ಕ್ಯಾಟ್ ಸವಿಯಲು ತಯಾರಾಗಬಹುದು. ಬಹುತೇಕ ಕಿಟ್‌ಕ್ಯಾಟ್ ಮೊಬೈಲ್‌ಗಳು ಈಗ 4.4.2 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಎರಡು ವಾರದ ಹಿಂದೆ ಗೂಗಲ್ ನೆಕ್ಸಸ್ ಮೊಬೈಲ್‌ಗಳಿಗೆ 4.4.3 ಮಾದರಿ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ ಕಿಟ್‌ಕ್ಯಾಟ್‌ನಲ್ಲಿನ ಬಗ್‌ಗಳು ಸಂಪೂರ್ಣವಾಗಿ ಹೋಗಿಲ್ಲ. ಒಂದಿಲ್ಲೊಂದು ಸಮಸ್ಯೆ ಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಎಲ್ಲ ನೆಕ್ಸಸ್ ಫೋನ್‌ಗಳಿಗೆ ನೂತನ ಮಾದರಿ ಅಪ್‌ಡೇಟ್ ಬರುವ ಸಾಧ್ಯತೆಯಿದೆ. ಆದರೆ ಗೂಗಲ್ ಹೊರತುಪಡಿಸಿ ಇನ್ನುಳಿದ ಕಂಪನಿಗಳ ಮೊಬೈಲ್‌ಗಳಿಗೆ ಯಾವಾಗ ಅಪ್‌ಡೇಟ್ ಬಿಡುಗಡೆಯಾಗುತ್ತದೆ ಎನ್ನುವುದು ಇನ್ನು ತಿಳಿಯಬೇಕಿದೆ.