ಹಕ್ಕಿಗಳ ಆಯುಸ್ಸು ಗಟ್ಟಿ! 'ವಿಂಡ್ ಟರ್ಬೈನ್‌ಗಳಿಗೆ ಸಿಕ್ಕಿ ಹಕ್ಕಿಗಳು ಸಾಯುತ್ತವೆ' ಎಂಬ ಕಂಪ್ಲೇಂಟನ್ನು ಪರಿಸರಪ್ರಿಯರು ಮಾಡ್ತಾ ಬೇಜಾನ್ ವರ್ಷಗಳೇ ಆಗಿವೆ. ಇದರ ವಿರುದ್ಧ ಟೆಕ್ಸಾಸ್‌ನಿಂದ ತಿಪಟೂರಿನ ತನಕ ಸಾವಿರಾರು ಪ್ರತಿಭಟನೆಗಳೂ ನಡೆದಿವೆ. ಇನ್ನುಮೇಲೆ ಹಕ್ಕಿಗಳು ಸಾಯಬೇಕಿಲ್ಲ. ಪರಿಸರಪ್ರಿಯರು ಗಂಟಲೊಣಗುವವರೆಗೆ ಕೂಗಬೇಕಿಲ್ಲ. ರೆಕ್ಕೆಗಳೇ ಇಲ್ಲ ಟರ್ಬೈನ್ ಬಂದಿದೆ! ಹೌದು, ಈ ಟರ್ಬೈನ್ ಚೌಕಾಕಾರದಲ್ಲಿ, ಮರಳು ಸೋಸುವ ಜಾಲರಿ ರೀತಿ ಇದೆ. ಡಚ್‌ನ ಜಾನ್ ಸ್ಮಿತ್ ಎಂಬ ಸಂಶೋಧಕ ಈ ಟರ್ಬೈನನ್ನು ಪರಿಚಯಿಸಿದ್ದು, ಇದು ಮಳೆಯ ಹನಿಗಳನ್ನೂ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.