ಆಲೂಗಡ್ಡೆ ಎಲ್ಲಿಂದ ಬಂತು ಗೊತ್ತಾ? ಆಲೂ ಚಿಪ್ಸ್, ಫಿಂಗರ್ ಚಿಪ್ಸ್ ಎಲ್ಲಾ ತಿಂದಿರ್ತೀರಾ ಅಲ್ವಾ? ಜೊತೆಗೆ ಮನೆಯಲ್ಲಿ ದೋಸೆ ಜೊತೆ ಆಲೂಗಡ್ಡೆ ಪಲ್ಯ ಇಲ್ಲ ಅಂದ್ರೆ ನಖಶಿಖಾಂತ ಕೋಪ ಬರುತ್ತೆ ತಾನೇ...? ಬರುತ್ತೆ ಬಿಡಿ. ಈ ಆಲೂಗಡ್ಡೆ ಎಲ್ಲಿಂದ ಬಂತು ಗೊತ್ತಾ? ಇದರ ತವರೂರು ಯಾವ್ದು ಅನ್ನೋ ಬಗ್ಗೆ ಏನಾದ್ರೂ ಐಡಿಯಾ ಇದಿಯಾ? ಆಲೂಗಡ್ಡೆ ನಮ್ಮ ದೇಶದ ತರಕಾರಿನೇ ಅಲ್ಲ. ಇದು ದಕ್ಷಿಣ ಅಮೆರಿಕದ ಆಂಡೆಸ್ ಮೌಂಟನ್‌ನಿಂದ ವಲಸೆ ಬಂದದ್ದು. ಇನ್ನೊಂದಿಷ್ಟು ಹೇಳಬೇಕಾದರೆ ಚಿಲಿಯ ಪಶ್ಚಿಮ ಕರಾವಳಿಯಲ್ಲೂ ಕಂಡು ಬರುತ್ತಿತ್ತು. ಯುರೋಪ್‌ನಲ್ಲಿ 1500 ನೇ ವರ್ಷದಲ್ಲಿ ಈ ಆಲೂಗಡ್ಡೆ ಪರಿಚಯವಾಯ್ತು. ಸದ್ಯ ಅಮೆರಿಕದಲ್ಲಿ ಆಲೂಗಡ್ಡೆ ತುಂಬಾ ಫೇವರಿಟ್ ತರಕಾರಿ. ಬೇಕರಿಯಲ್ಲಿ, ಆಲೂ ಚಿಪ್ಸ್‌ನಲ್ಲಿ ಹೆಚ್ಚಾಗಿ ಇದನ್ನು ಬಳಸ್ತಾರಂತೆ. ಭಾರತದಲ್ಲಿ ಮೊಗಲ್ ರಾಜ ಜಹಾಂಗೀರ್(1615 ರಿಂದ 19) ಕಾಲದಲ್ಲಿ ಅಲೂಗಡ್ಡೆ ಕೃಷಿಗೆ ಉತ್ತೇಜನ ನೀಡಲಾಯ್ತು ಎಂದು ಇತಿಹಾಸ ಹೇಳುತ್ತೆ. ನಮ್ಮಲ್ಲೂ ಕೂಡ ಆಲೂಗಡ್ಡೆ ತುಂಬಾನೇ ಫೇವರಿಟ್ ತರಕಾರಿ.