ನೆಟ್ ನೀತಿ: ಸಲಹಾ ಅವಧಿ ವಿಸ್ತರಣೆ ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವ ಕೇಂದ್ರ ಸರ್ಕಾರ... ನವದೆಹಲಿ: ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವ ಕೇಂದ್ರ ಸರ್ಕಾರ ಈ ಗಡುವನ್ನು ಆ.20ರವರೆಗೆ ವಿಸ್ತರಿಸಿದೆ. ನೀತಿಯ ಕುರಿತ ಸಾರ್ವಜನಿಕ ಸಲಹೆಗಳು ದಿಢೀರ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಆ.14ರ ಗಡುವನ್ನು ವಿಸ್ತರಿಸಿ ಸರ್ಕಾರ, 6ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಅಂತರ್ಜಾಲ ತಟಸ್ಥ ನೀತಿ ರೂಪಿಸುವ ನಿಟ್ಟಿನಲ್ಲಿ ನೇಮಕವಾಗಿದ್ದ ಸಮಿತಿ ಸಲಹೆಗಳಿಗೆ ಸರ್ಕಾರದ ಚರ್ಚಾ ಫೋರಂ . ಮೂಲಕ ಸಾರ್ವಜನಿಕ ಪ್ರತಿಕ್ರಿಯೆಗೆ ಅವಕಾಶ ಕಲ್ಪಿಸಿತ್ತು. ಆ.14ರಂದು 700 ಪ್ರತಿಕ್ರಿಯೆ ಪಡೆದಿದ್ದ ಫೋರಂ, ಕೆಲವು ಆನ್‍ಲೈನ್ ಗ್ರೂಪ್ ಗಳ ಆಂದೋಲನದ ಪರಿಣಾಮ ಶನಿವಾರ ದಿಡಿೀರನೆ 33,600 ಪ್ರತಿಕ್ರಿಯೆ ಪಡೆದಿದೆ.