ನಿಂದನಾತ್ಮಕ ವ್ಯಕ್ತಿಗೆ ಟ್ವಿಟರ್ ನಿಷೇಧ! ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಅನ್ಯರನ್ನು ನಿಂದಿಸುತ್ತಿದ್ದ ನ್ನು ಟ್ವಿಟರ್ ನಿಷೇಧಿಸಿದೆ. ನ್ಯೂಯಾರ್ಕ್: ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೆ ಅನ್ಯರನ್ನು ನಿಂದಿಸುತ್ತಿದ್ದ ನ್ನು ಟ್ವಿಟರ್ ನಿಷೇಧಿಸಿದೆ. ಯಿಯನ್ನೋಪೌಲೋಸ್ ಗೋಸ್ಟ್ ಬಸ್ಟರ್ಸ್ ಚಿತ್ರದ ಕಲಾವಿದೆ ಲೆಸ್ಸಿ ಜೋನ್ಸ್ ವಿರುದ್ಧ ಆನ್ ಲೈನ್ ಅಭಿಯಾನ ಕೈಗೊಂಡ ಬೆನ್ನಲ್ಲೇ ಟ್ವಿಟರ್ ನಿಷೇಧವಿಧಿಸಿದೆ. ಸಾರ್ವಜನಿಕರು ತಮ್ಮ ವೈವಿಧ್ಯಮಯ ಅಭಿಪ್ರಾಯಗಳನ್ನು ಟ್ವಿಟರ್ ಮೂಲಕ ಹಂಚಿಕೊಳ್ಳಬಹುದು. ಆದರೆ ಮತ್ತೊಬ್ಬರನ್ನು ಗುರಿಯಾಗಿರಿಸಿಕೊಂಡು ನಿಂದಿಸುವಂತಿಲ್ಲ, ಮತ್ತೊಬ್ಬರನ್ನು ನಿಂದಿಸುವುದನ್ನು ಟ್ವಿಟರ್ ನ ನಿಯಮಗಳು ನಿಷೇಧಿಸುತ್ತದೆ ಎಂದು ಟ್ವಿಟರ್ ಹೇಳಿದೆ. ಕಳೆದ 48 ಗಂಟೆಗಳಲ್ಲಿ ಟ್ವಿಟರ್ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕೆಲವು ಖಾತೆಗಳನ್ನು ಗಮನಿಸಿದ್ದೇವೆ, ಆದ್ದರಿಂದ ಆ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಿರುವ ಟ್ವಿಟರ್ ಕೆಲವು ಖಾತೆಗಳನ್ನು ನಿಷೇಧಿಸುತ್ತಿರುವುದಾಗಿ ಘೋಷಿಸಿದೆ. ಟ್ವಿಟರ್ ನಿಷೇಧಕ್ಕೆ ಪ್ರತಿಕ್ರಿಯೆ ನೀಡಿರುವ ಯಿಯನ್ನೋಪೌಲೋಸ್, ನಿಷೇಧ ವಿಧಿಸುವ ಮೂಲಕ ಟ್ವಿಟರ್ ಮುಸ್ಲಿಂ ಭಯೋತ್ಪಾದಕರಿಗೆ ಸುರಕ್ಷಿತ ತಾಣವೆಂದು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಯಿಯನ್ನೋಪೌಲೋಸ್ ಕಳೆದ ಕೆಲವು ವರ್ಷಗಳಿಂದ ತನ್ನ ಟ್ವಿಟರ್ ಟ್ರೊಲ್ ಗಳಿಂದ ಟ್ವಿಟರ್ ಬಳಕೆದಾರರನ್ನು ನಿಂದಿಸುತ್ತಿದ್ದರು. ಇದನ್ನು ಗಮನಿಸಿದ್ದ ಟ್ವಿಟರ್ ಯಿಯನ್ನೋಪೌಲೋಸ್ ನ ಟ್ವಿಟರ್ ನ ವೆರಿಫೈಯ್ಡ್ ಸ್ಟೇಟಸ್ ನ್ನು ತೆಗೆದು ಹಾಕಿತ್ತು. ಆದರೆ ಟ್ವೀಟ್ ಮಾಡಲು ಅವಕಾಶ ನೀಡಿತ್ತು.