ಮಕ್ಕಳ ದಿನಾಚರಣೆ ಸಂಭ್ರಮಕ್ಕೆ ಗೂಗಲ್ ಡೂಡಲ್ ವಿಶಾಖಪಟ್ನಂನ ೯ ವರ್ಷದ ಬಾಲಕ ಪಿ ಕಾರ್ತಿಕ್ ರಚಿಸಿರುವ ಕಲಾಕೃತಿ ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ ಗೆದ್ದಿದ್ದು ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು: ವಿಶಾಖಪಟ್ನಂನ ೯ ವರ್ಷದ ಬಾಲಕ ಪಿ ಕಾರ್ತಿಕ್ ರಚಿಸಿರುವ ಕಲಾಕೃತಿ ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ ಗೆದ್ದಿದ್ದು ಮಕ್ಕಳ ದಿನಾಚರಣೆ ಅಂಗವಾಗಿ ಇಂದು ಗೂಗಲ್ ಮುಖಪುಟದಲ್ಲಿ ರಾರಾಜಿಸಿದೆ. ವಿವಿಧ ಸಂಭ್ರಮಗಳ ಸಮಯದಲ್ಲಿ ಗೂಗಲ್ ಡೂಡಲ್ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಇದು ಗೂಗಲ್ ನಡೆಸಿರುವ ಏಳನೇ ಡೂಡಲ್ ಸ್ಪರ್ಧೆ. ಪರಿಸರ ರಕ್ಷಣೆಯ ಥೀಮ್ ಹೊಂದಿರುವ ಈ ಕಲಾಕೃತಿಯಲ್ಲಿ ಪ್ಲಾಸ್ಟಿಕ್ ಅನ್ನು ರೀ ಸೈಕಲ್ ಮಾಡಿ ಪರಿಸರ ಉಳಿಸುವ ಸಂದೇಶ ಹೊಂದಿದೆ. ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ.