ಫೇಸ್ ಬುಕ್ ನಲ್ಲಿ ನಿಮ್ಮ ಗೆಳೆತನದಿಂದ ದೂರ ಸರಿದವರನ್ನು ಪಟ್ಟಿ ಮಾಡಲು ನೂತನ ಆಪ್ ನಿಮ್ಮ ರಾಜಕೀಯ ನಿಲುವಗಳ ಭಿನ್ನಾಭಿಪ್ರಾಯಗಳಿಂದಲೋ, ಅಥವಾ ನಿಮ್ಮ ಯಾವುದೋ ಸ್ಟೇಟಸ್ ಅಥವಾ ಪ್ರತಿಕ್ರಿಯೆ ಮುಜುಗರ ತಂದಿತು ಎಂತಲೋ ನ್ಯೂಯಾರ್ಕ್: ನಿಮ್ಮ ರಾಜಕೀಯ ನಿಲುವಗಳ ಭಿನ್ನಾಭಿಪ್ರಾಯಗಳಿಂದಲೋ, ಅಥವಾ ನಿಮ್ಮ ಯಾವುದೋ ಸ್ಟೇಟಸ್ ಅಥವಾ ಪ್ರತಿಕ್ರಿಯೆ ಮುಜುಗರ ತಂದಿತು ಎಂತಲೋ ನಿಮ್ಮನ್ನು 'ಅನ್-ಫ್ರೆಂಡ್' ಮಾಡಿದವರು ಯಾರೆಂದು ನಿಮಗೆ ತಿಳಿಯಲಿಲ್ಲವೇ? ಚಿಂತೆ ಬೇಡ! "ವೂ ಡಿಲೀಟೇಡ್ ಮಿ ಆನ್ ಫೇ ಬುಕ್" (ನನ್ನ ಫೇಸ್ ಬುಕ್ ನಿಂದ ತೆಗೆದವರ್ಯಾರು) ಎಂಬ ಹೊಸ ಐ ಒ ಎಸ್ ಆಪ್ ಬಂದಿದೆ. ಅದು ನಿಮ್ಮ ಗೆಳೆತನದಿಂದ ದೂರ ಸರಿದವರನ್ನೆಲ್ಲಾ ಪಟ್ಟಿ ಮಾಡುತ್ತದೆ. ಇದೆ ರೀತಿಯ ಆಪ್ ಟ್ವಿಟ್ಟರ್ ಗೆ ಕೂಡ ಇದೆ. ಅದು 'ವೂ ಅನ್ ಫಾಲ್ಲೋಡ್ ಮಿ' ಎಂಬ ಆಪ್ ಕೂಡ ನಿಮ್ಮನ್ನು ಫಾಲ್ಲೋ ಮಾಡುವುದರಿಂದ ದೂರ ಸರಿದ ಅಥವಾ ಟ್ವಿಟ್ಟರ್ ಅನ್ನೇ ಬಿಟ್ಟು ಓಡಿ ಹೋದವರನ್ನು ಪಟ್ಟಿ ಮಾಡುತ್ತದೆ. ಈ ಆಪ್ ಈ ಹಿಂದೆ ನಡೆದಿರುವ ಚಟುವಟಿಕೆಗಳನ್ನು ಕೆದಕುವುದಿಲ್ಲ. ಆದರೆ ಅದನ್ನು ಆಕ್ಟೀವೇಟ್ ಮಾಡಿಕೊಂಡ ನಂತರ ನಡೆಯುವ ಚಟುವಟಿಕೆಗಳನ್ನೆಲ್ಲಾ ನಿಮಗೆ ಪಟ್ಟಿ ಮಾಡಿ ಕೊಡುತ್ತದೆ.