ಜಪಾನ್ ಗಢ ಗಢ ಈ ಪ್ರಶ್ನೆಗೆ ಉತ್ತರಿಸೋದು ಕಷ್ಟದ ಕೆಲಸವೇ ಬಿಡಿ. ಮಾನವ ನಿತ್ಯವೂ ಒಂದಲ್ಲಾ ಒಂದು ಅವಘಡಕ್ಕೆ ತುತ್ತಾಗುತ್ತಲೇ ಇದ್ದಾನೆ. ಮೊನ್ನೆ ಮೊನ್ನೆಯಷ್ಟೇ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪವನ್ನು ನಾವಿನ್ನೂ ಮರೆತೇ ಇಲ್ಲ. ಅದಾಗಲೇ ಮತ್ತೊಮ್ಮೆ ಜಪಾನ್‌ನಲ್ಲೇ ಭಾರಿ ಪ್ರಮಾಣದ ಭೂಕಂಪ ಸಂಭವಿಸಲಿದೆ ಎಂದು ಭೂಗರ್ಭಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ರಿಕ್ಟರ್ ಮಾಪಕದಲ್ಲಿ 9ರಷ್ಟು ತೀವ್ರತೆಯೊಂದಿಗೆ ಈ ಭೂಕಂಪ ಸಂಭವಿಸಲಿದೆ ಎಂಬುದು ಅವರ ಸಂಶೋಧನೆಯ ತಿರುಳು. ಕೆಲ ದಿನಗಳ ಹಿಂದೆಯಷ್ಟೇ ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ಸಂಶೋಧಕರು ಜಪಾನ್ ಸದ್ಯದಲ್ಲೇ ಮತ್ತೊಂದು ಭೀಕರ ಭೂಕಂಪಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ, ಕಳೆದ 30 ವರ್ಷಗಳಿಂದ ಸಂಭವಿಸಿದ ಭೂಕಂಪಗಳು ಮತ್ತು ಭೂಮಿಯ ಗುಣಲಕ್ಷಣಗಳನ್ನು ಅವಲೋಕಿಸಿ ಈ ವರದಿ ನೀಡಿದ್ದಾರೆ. ಅದರಂತೆ ಜಪಾನ್, ಚಿಲಿ, ಸುಮಾತ್ರ ಮತ್ತು ಅಲಾಸ್ಕಗಳಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಲಿದೆ ಎಂದು ಹೇಳಿದ್ದಾರೆ.