ಏರ್ಟೆಲ್ ಟ್ಯೂಶನ್ ಟ್ಯೂಶನ್ ಎಂಬ ಭೂತದ ಅಸ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿರುವಾಗಲೇ, ಆ ದಂಧೆಯು ಆನ್ಲೈನ್ ಆಗುತ್ತಿದೆ. ಮನೆಯಲ್ಲಿಯೇ ಕೂತು ಟ್ಯೂಶನ್ ನೀಡುವವರೆಗೆ ತಂತ್ರಜ್ಞಾನ ಬೆಳೆಯುತ್ತಿದೆ. ಇದರ ಮೊದಲ ಹಂತವಾಗಿ ಏರ್ಟೆಲ್ ಕಂಪನಿಯು ಐ-ಎಕ್ಸಾಮ್ ಎಂಬ ವಿನೂತನ ಯೋಜನೆ ಪ್ರಾರಂಭಿಸಿದೆ. ಪ್ರೌಢಶಾಲೆ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿಷ್ಠಿತ ಏರ್ಟೆಲ್ ಕಂಪನಿಯು ಈ ಸೇವೆ ಪ್ರಾರಂಭಿಸಿದೆ. ಆದರೆ ಇದಕ್ಕೆ ಅಂತರ್ಜಾಲ, ಮೊಬೈಲ್ ಅಥವಾ ಕಂಪ್ಯೂಟರ್ನ ಅಗತ್ಯವಿಲ್ಲ. ಮನೆಯಲ್ಲಿರುವ ನಿಮ್ಮ ಮೂರ್ಖರ ಪೆಟ್ಟಿಗೆ ಎಂದರೆ ಟಿವಿ ಮೂಲಕವೇ ನೀವು ಬುದ್ಧಿವಂತರಾಗುವ ಅವಕಾಶವಿದೆ. 8, 9, 10, ಎಂಜಿನಿಯರಿಂಗ್, ವೈದ್ಯಕೀಯ, ಎಂಬಿಎ ಕೋರ್ಸ್ಗಳಿಗೆ ಟ್ಯೂಶನ್ ಲಭ್ಯವಿದೆ. ಮನೆಯಲ್ಲಿನ ಏರ್ಟೆಲ್ ಸೆಟ್ ಟಾಪ್ ಬಾಕ್ಸ್ ಮೂಲಕವೇ ಟ್ಯೂಶನ್ ಪಡೆಯಬಹುದು. ಪ್ರತಿ ವಾರಕ್ಕೆ ರು. 48ರಿಂದ 10 ತಿಂಗಳವರೆಗಿನ ಕೋರ್ಸ್ ಲಭ್ಯವಿದೆ. ಏರ್ಟೆಲ್ ವೆಬ್ಸೈಟಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿ ದೊರೆಯುತ್ತದೆ.