ಸೆಕ್ಸ್ ಅಡಿಕ್ಷನ್ ರೋಗವಲ್ಲ! ಸೆಕ್ಸ್ ಅಡಿಕ್ಷನ್ ಒಂದು ರೋಗ ಎಂಬ ವಾದಕ್ಕೆ ಈಗ ಸೋಲಾಗಿದೆ. ವಿಜ್ಞಾನಿಗಳ ಪ್ರಕಾರ, ಇದು ರೋಗವೇ ಅಲ್ಲವಂತೆ. ಈ ಸಂಬಂಧ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಸೈಕಿಯಾಟ್ರಿಕ್ ಅಸೋಸಿಯೇಷನ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೆ ಡ್ರಗ್ಸ್ ತೆಗೆದುಕೊಂಡೋ ಅಥವಾ ಇನ್ನಾವುದೋ ಕಾರಣಕ್ಕೆ ಈ ಚಟಕ್ಕೆ ಬಿದ್ದಿದ್ದರೆ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದೀತು ಎಂದು ಈ ಸಂಸ್ಥೆ ಹೇಳಿದೆ. ಇದನ್ನು ಯಾವಾಗ ರೋಗ ಎಂದು ಪರಿಗಣಿಸಬೇಕು ಎಂಬ ಬಗ್ಗೆಯೂ ಅದು ಹೇಳಿದೆ. ಪೋರ್ನೋಗ್ರಫಿ ಸೈಟ್‌ಗಳನ್ನೇ ನೋಡುತ್ತಾ ಮನೆಯಲ್ಲೇ ಕುಳಿತು ಕೆಲಸ ಕಳೆದುಕೊಂಡಾಗ ಮಾತ್ರ ಗಂಭೀರವಾಗಿ ಪರಿಗಣಿಸಿ, ಮಾನಸಿಕವಾಗಿ ಚಿಕಿತ್ಸೆ ಕೊಡಿಸಬೇಕಾದ ಪ್ರಮೇಯ ಬರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಎಲ್ಲವೂ ಸರಿ ಇದ್ದು, ಪೋರ್ನೋಗ್ರಫಿ ಸೈಟ್‌ಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡವರಿಗೆ ಹೇಗೆ ಮೆಂಟಲಿ ಡಿಸಾರ್ಡರ್ ಆಗಿದೆ ಎಂದು ತಿಳಿಯುವುದು ಎಂದು ಅವರು ಪ್ರಶ್ನಿಸಿದ್ದಾರೆ.