ಪಶ್ಚಿಮ ಬಂಗಾಳದಲ್ಲಿ ಭಾರತದ ಪ್ರಥಮ ಗಂಗಾನದಿ ಡಾಲ್ಫಿನ್ ಮೀಸಲು ಸ್ಥಳ ಅಳಿವಿನ ಅಂಚಿನಲ್ಲಿರುವ ಗಂಗಾನದಿ ಡಾಲ್ಫಿನ್ ಗಳ ಸಂತತಿಯನ್ನು ಉಳಿಸಲು ಭಾರತದ ಪ್ರಥಮ ಡಾಲ್ಫಿನ್ ರಿಸರ್ವ್(ಮೀಸಲು ಸ್ಥಳ) ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗುತ್ತಿದೆ. ಕೋಲ್ಕತ್ತ: ಅಳಿವಿನ ಅಂಚಿನಲ್ಲಿರುವ ಗಂಗಾನದಿ ಡಾಲ್ಫಿನ್ ಗಳ ಸಂತತಿಯನ್ನು ಉಳಿಸಲು ಭಾರತದ ಪ್ರಥಮ ಡಾಲ್ಫಿನ್ ರಿಸರ್ವ್(ಮೀಸಲು ಸ್ಥಳ) ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗುತ್ತಿದೆ. ಹೂಗ್ಲಿ ನದಿಯಲ್ಲಿ ಮೀಸಲು ಸ್ಥಳ ನಿರ್ಮಾಣವಾಗಲಿದ್ದು, ಇದನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ. ಡಾಲ್ಫಿನ್ ಗಳ ಮೀಸಲು ಸ್ಥಳ ನಿರ್ಮಾಣಕ್ಕೆ ಗಡುವು ವಿಧಿಸಿಲ್ಲ ಎಂದು ಪಶ್ಚಿಮ ಬಂಗಾಳ ಮತ್ತು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ. ಇತ್ತೀಚಿನ ವರದಿ ಪ್ರಕಾರ 2000 ಗಂಗಾನದಿ ಡಾಲ್ಫಿನ್ ಗಳು ಭಾರತದಿಂದ ಕಣ್ಮರೆಯಾಗಿದ್ದವು. 2010 ರಲ್ಲಿ ಗಂಗಾ ನದಿ ಡಾಲ್ಫಿನ್ ಗಳನ್ನು ರಾಷ್ಟ್ರೀಯ ಜಲವಾಸಿ ಪ್ರಾಣಿ ಎಂದು ಘೋಷಿಸಲಾಗಿತ್ತು.