ಮೈಕ್ರೋ ಚಾರ್ಜರ್ ಎಲ್ಲೋ ಟ್ರಿಪ್ ಹೊರಡ್ಬೇಕು ಅಥವಾ ಒಂದೆರಡು ದಿನದ ಮಟ್ಟಿಗೆ ಹೊರಗೆಲ್ಲೋ ಹೋಗ್ಬೇಕು. ಸ್ಟೈಲಿಶ್ ಆಗಿ ಹೋಗುವ ಈ ಟೈಮಲ್ಲಿ ಮೊಬೈಲ್ ಬೇಕೇಬೇಕು. ಆದರೆ, ಅರ್ಧ ಕೈ ಗಾತ್ರದ ಆ ಚಾರ್ಜರ್ ಒಯ್ಯುವುದೇ ಒಂದು ಸಮಸ್ಯೆ. ಈಗ ಅದಕ್ಕೂ ಪರಿಹಾರ ಸಿಕ್ಕಿದೆ. ಡಿವೋಟೆಕ್ ಇಂಡಸ್ಟ್ರೀಸ್ ವಿಶ್ವದ ಚಿಕ್ಕ ಜಾರ್ಜರ್ ಅನ್ನು ಪರಿಚಯಿಸಿದೆ. ಇದು ಕೇವಲ ಕಿವಿಯ ರಿಂಗ್ ಗಾತ್ರದ್ದು. 1.3 ಇಂಚು ಉದ್ದ, 0.9 ಇಂಚು ಅಗಲ, 0.5 ಇಂಚು ತೆಳು. ಇದರ ತೂಕ ಜಸ್ಟ್ 14 ಗ್ರಾಮ್. ಮೊಬೈಲ್‌ಗೆ ಬೇಕಾದ ಮೆಗಾಕೆಪಾಸಿಟಿಯನ್ನು ಈ ಚಾರ್ಜರ್ ತುಂಬಬಲ್ಲದು.